ಎ.ಪಿ.ಎಸ್ ಒಲಿಂಪಿಕ್ಸ್ ಅನಂತ ಜ್ಯೋತಿಗೆ ಚಾಲನೆ

ಬೆಂಗಳೂರು.ನ.05:- ಸಹಕಾರ, ಉತ್ಸಾಹ ಮತ್ತು ಕ್ರೀಡಾತ್ಮಕ ಮನೋಭಾವವನ್ನು ಆಚರಿಸುವ ಉದ್ದೇಶದಿಂದ ಆಚಾರ್ಯ ಪಾಠಶಾಲಾ ಸಂಸ್ಥೆ ಎ.ಪಿ.ಎಸ್. ಒಲಿಂಪಿಕ್ಸ್ ಅನಂತ ಜ್ಯೋತಿ'' ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವೈಯಕ್ತಿಕ ಮತ್ತು ತಂಡದ ಕ್ರೀಡೆಗಳು ಆಯೋಜಿಸಲ್ಪಟ್ಟಿವೆ. ಉದ್ಘಾಟನಾ ಸಮಾರಂಭವು ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸುವುದರಿಂದ ಆರಂಭವಾಯಿತು. ಪ್ರಜ್ವಲ್ ರಾಜ್, ಮಾಜಿ ರಣಜಿ ಟ್ರೋಫಿ ಆಟಗಾರರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಟಿ.ವಿ. ಪ್ರಭು, ಕ್ರೀಡಾ ಸಮಿತಿಯ ಅಧ್ಯಕ್ಷರು, ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಬೇಕು ಎಂದು ಕರೆ ನೀಡಿದರು. ಸಿ.ಎ. ಡಾ. ವಿಷ್ಣು ಭಾರತ ಆಲಂಪಲ್ಲಿ), ಅಧ್ಯಕ್ಷರು, ಕ್ರೀಡಾ ಶಪಥವನ್ನು ವಾಚಿಸಿದರು. ಪೆÇ್ರ. ಎ. ಪ್ರಕಾಶ, ಪ್ರಧಾನ ಕಾರ್ಯದರ್ಶಿಗಳು, ಧನ್ಯವಾದಗಳನ್ನು ಸಲ್ಲಿಸಿದರು. ಎ.ಪಿ.ಎಸ್. ಮೈದಾನವು 500ಕ್ಕೂ ಹೆಚ್ಚು ಸ್ಪರ್ಧಿಗಳ ಉತ್ಸಾಹದಿಂದ ನಿನ್ನದಿತು. ಎಲ್ಲೆಡೆ ಹರ್ಷ, ಘೋಷಣೆಗಳು ಮತ್ತು ಸ್ಪರ್ಧೆಯ ಉತ್ಸಾಹ ತುಂಬಿತ್ತು. ಎ.ಪಿ.ಎಸ್. ಒಲಿಂಪಿಕ್ಸ್ ಕೇವಲ ಸ್ಪರ್ಧೆಯಲ್ಲ ಇದು ಉತ್ಸಾಹ, ಶಿಸ್ತು ಮತ್ತು ಒಗ್ಗಟ್ಟಿನ ಹಬ್ಬ.” ಈ ಕ್ರೀಡಾ ಕಾರ್ಯಕ್ರಮವು ಆಚಾರ್ಯ ಪಾಠಶಾಲಾ ಸಂಸ್ಥೆಗಳ ಸಮಗ್ರ ಶಿಕ್ಷಣದ ಪರಂಪರೆಯನ್ನು ಮತ್ತೊಮ್ಮೆ ತೋರಿಸಿದೆ.