ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮೇ,22- 
ಕಲಿಕೆಯಲ್ಲಿ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದಾದರಲ್ಲಿ ಕೂಡ ನಾವು ಪ್ರತಿಭಾ ವಂತರಾದರೇ ನಮ್ಮನ್ನು ಹೊತ್ತು ಮೆರವಣಿಗೆ ಮಾಡುವ ವಿವಿಧ ಸಂಸ್ಥೆ ಗಳು ಈ ಸಮಾಜದಲ್ಲಿವೆ ಎಂದು ಪಿ.ಕಾರ್ಡ್  ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024 25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
60 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು 15 ಪಿಯುಸಿ ವಿದ್ಯಾರ್ಥಿಗಳಿಗೆ ತಲಾ ರೂ.5000 ರಂತೆ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಿದರು. ಶಾಸಕ ಬಿ ಎಂ ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಗುರಪ್ಪ, ವಿಎನ್ಎಸ್ಎಸ್ ಅಧ್ಯಕ್ಷ ಶಾಂತನಗೌಡ, ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕರಿಬಸಪ್ಪ ಮಾತನಾಡಿದರು.
ಪಿ ಕಾರ್ಡು ಬ್ಯಾಂಕ್ ಉಪಾಧ್ಯಕ್ಷ ಚಂದ್ರಾರೆಡ್ಡಿ, ವ್ಯವಸ್ಥಾಪಕ ತಿಪ್ಪಣ್ಣ ಎಸ್ ಬನ್ ಜೋಡಿ, ನಿರ್ದೇಶಕರಾದ ಪಿ ತಿಮ್ಮಪ್ಪ, ಜೆಡಿಎಸ್ ಸ್ವಾಮಿ ಮಲ್ಲಿಕಾರ್ಜುನ, ಶಿವಶಂಕರಗೌಡ, ನಗರ ಸಭೆ ಸದಸ್ಯ ಗಣೇಶ ಹಾಗೂ ವಿದ್ಯಾರ್ಥಿಗಳ ಪೋಷಕರು ಬ್ಯಾಂಕ್ ಸಿಬ್ಬಂದಿಗಳು ಇದ್ದರು.