
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.04: ಶ್ರಿದರಗಡ್ಡೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಳ್ಳಾರಿಯ ತಾಲೂರು ರಸ್ತೆಯಲ್ಲಿ ಬರುವ ಎಸ್.ಆರ್. ಲೇಔಟ್ ಹಂತ 2 ರ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಸುಮಾರು 6 ವರ್ಷಗಳಿಂದ 20 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, 5 ವರ್ಷಗಳಿಂದ ವಿದ್ಯುತ್ ಕಂಬಗಳು ವಿದ್ಯುತ್ ದೀಪಗಳಿಲ್ಲದೆ ನಿತ್ಯವೂ ಕತ್ತಲಿನಲ್ಲಿ ಬದುಕುವಂತಾಗಿದೆ. ಮತ್ತು ಪಾರ್ಕ್ ಗಳಲ್ಲಿ ಗಿಡ ಗಂಟಿಗಳು ಬೆಳೆದು ಹಾವು, ಚೇಳು ಮತ್ತಿತರ ಅಪಾಯಕಾರಿ ಜೀವಿಗಳು ನಿತ್ಯವೂ ಓಡಾಡುವುದರಿಂದ ಮಕ್ಕಳು, ವೃದ್ಧರು ಮತ್ತು ಸಾರ್ವಜನಿಕರಿಗೆ ಆತಂಕ ಮನೆಮಾಡಿದೆ. ಮಳೆ ಬಂದರೆ ರಸ್ತೆಗಳು ಮಳೆನೀರು ಮತ್ತು ಚರಂಡಿ ನೀರಿನಿಂದ ತುಂಬಿಹೋಗುತ್ತಿವೆ. ಇಂತಹ ಕನಿಷ್ಠ ಸೌಲಭ್ಯಗಳಿಗಾಗಿ ಹೊರಡುವ ಪರಿಸ್ಥಿತಿ ಇದೆ. ಎಷ್ಟೇ ಮನವಿ ಪತ್ರ ನೀಡಿದರು ನಿರ್ಲಕ್ಷ್ಯ ವಹಿಸಿದ್ದಾರೆ. ಸಂಬಂಧ ಪಟ್ಟ ಶ್ರೀಧರಗಡ್ಡೆ ಪಂಚಾಯ್ತಿ ಮತ್ತು ಬಳ್ಳಾರಿ ಪುರಸಭೆ ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ, ಬಡಾವಣೆಯ ನಾಗರಿಕ ಸಮಿತಿಯ ಡಾ. ಉಪೇಂದ್ರ, ಮಲ್ಲಿಕಾರ್ಜುನ್ ಸಿ.ಕೆ., ಮತ್ತು ಎ.ದೇವದಾಸ್, ಈ.ಹನುಮಂತಪ್ಪ, ಜಗದೀಶ್ ನೇಮಕಲ್, ಈ.ಹೆಚ್.ಪ್ರಮೋದ್ ಉಪಸ್ಥಿತರಿದ್ದರು.































