
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ; ಅ,23-ನಗರದ ಬ್ರೂಸ್ಪೇಟೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಿಗೆ ಎಸ್ ಪಿ ಡಾ.ಸುಮನ್ ಡಿ.ಪನ್ನೇಕರ್ ಅವರು ಮೊನ್ನೆ ಅ ನಿರೀಕ್ಷಿತ ಭೇಟಿ ನೀಡಿ. ದಾಖಲೆಗಳು, ಮುದ್ದೆಮಾಲು, ತನಿಖೆಯ ಪ್ರಗತಿ ಹಾಗೂ ಪ್ರಮುಖ ರಿಜಿಸ್ಟರ್ಗಳನ್ನು ಪರಿಶೀಲಿಸಿ, ತನಿಖೆಯ ಗುಣಮಟ್ಟ, ಆಡಳಿತಾತ್ಮಕ ಶಿಸ್ತು ಮತ್ತು ಸಾರ್ವಜನಿಕ ಸೇವೆ ಮತ್ತಷ್ಟು ಬಲಪಡಿಸಲು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.






























