
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.24: ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಜಾರಿಗೆ ತಂದಿರುವ ಆದಿಕರ್ಮಯೋಗಿ ಯೋಜನೆಯನ್ನು ಜಿಲ್ಲೆಯ 59 ಗ್ರಾಮಗಳಲ್ಲಿ ,17 ಇಲಾಖೆಗಳ ಮೂಲಕ ಅನುಷ್ಟಾನಕ್ಕೆ ತರಲು ಕ್ರಿಯಾ ಯೋಜನೆ ಸಿದ್ದಗೊಂಡಿದೆ.
ಬುಡಕಟ್ಟು ಜನರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿ ನಿಟ್ಟನಲ್ಲಿ ಕೇಂದ್ರ ಸರ್ಕಾರ ಈ ವರ್ಷ ಆದಿಕರ್ಮಯೊಗಿ ಯೋಜನೆ ಜಾರಿಗೆ ತಂದಿದ್ದು 2030 ರೊಳಗೆ ಬುಡಕಟ್ಟು ಜನಾಂಗದ ಸರ್ವಾಂಗೀಣ ಅಭಿವೃದ್ಧಿಯ ಸಂಕಲ್ಪ ಮಾಡಿದೆ.
ಬಳ್ಳಾರಿ ಜಿಲ್ಲೆಯ ಒಟ್ಟು ಜನ ಸಂಖ್ಯೆಯಲ್ಲಿ ಶೇ 17 ರಷ್ಟು ಅಂದರೆ 2.51 ಲಕ್ಷ ಜನರು ಪರಿಶಿಷ್ಟ ವರ್ಗಕ್ಕೆ ಸೇರಿದ್ದಾರೆ.
ಈ ದಿಶೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಎಸ್ಟಿ ಸಮುದಾಯ ಹೆಚ್ಚಿಗೆ ಇರುವ 59 ಹಳ್ಳಿಗಳನ್ನು ಆಯ್ಕೆ ಮಾಡಿದ್ದು. ಇಲ್ಲಿ, ರಸ್ತೆ, ಬೀದಿ ದೀಪ, ಆಸ್ಪತ್ರೆ ವ್ಯವಸ್ಥೆ, ಕುಡಿಯುವ ನೀರು, ಆಧಾರ ಕಾರ್ಡು, ಬಿಪಿಎಲ್ ಕಾರ್ಡು, ಆಯುಷ್ಯ್ಮಾನ್ ಕಾರ್ಡು ಸೌಲಭ್ಯ ಒದಗಿಸುವುದು. ಅವರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ಕೆಲಸಕ್ಕೆ ಆದಿ ಸೇವಾ ಕೇಂದ್ರಗಳನ್ನು ಆಯಾ ಹಳ್ಳಿಗಳ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ತೆರೆದಿದ್ದು. ಇಲ್ಲಿ ಬುಡಕಟ್ಟು(ಎಸ್ಟಿ) ಜನ ತಮ್ಮಅಹವಾಲಯಗಳನ್ನು ಸಲ್ಲಿಸಿದ್ದು ಅವುಗಳನ್ನು ಪರಿಶೀಲಿಸಿ ಯೋಜನಾ ವರದಿ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ನೀಡಿದೆ. ಜಿಲ್ಲಾಡಳಿತವೂ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಅಲ್ಲಿದ ಬಿಡುಗಡೆಯಾದ ಅನುದಾನದಿಂದ ಅಭಿವೃದ್ಧಿ ಯೋಜನರ, ತರಬೇತಿ ಮೊದಲಾದವುಗಳನ್ನು ಕೈಗೊಳ್ಳಲಿದೆಂದು ರಾಜ್ಯದ ಪರಿಶಿಷ್ಟ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಾಷು ಅವರು ಹೇಳಿದ್ದಾರೆ.

























