ಎರಡು ದಿನಗಳ ಓದು ಕರ್ನಾಟಕ ತರಬೇತಿ ಕಾರ್ಯಗಾರ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.13
: ಸದಾ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡು ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ತಯಾರು ಮಾಡಬೇಕಾದುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಓದು ಕರ್ನಾಟಕ ತರಬೇತಿ ನೋಡಲ್ ಅಧಿಕಾರಿ ಆರ್.ಬಿ.ಉದೇಶ್ ಗೌಡ. ಅಭಿಪ್ರಾಯಪಟ್ಟರು.


ಅವರು ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಓದು ಕರ್ನಾಟಕ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲಾ ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಇತರ ಮಕ್ಕಳೊಂದಿಗೆ ಸಮನ್ವಯಗೊಳಿಸಿ ಅವರುಗಳು ಸಹ ಉತ್ತಮ ಕಲಿಕಾ ಪ್ರಗತಿ ಸಾಧಿಸಲು ಅನುಕೂಲವಾಗುವಂತೆ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು ತರಬೇತಿ ಪಡೆದ ಶಿಕ್ಷಕರು ತರಬೇತಿಯ ಅಂಶಗಳನ್ನು ಶಾಲಾ ತರಗತಿ ಕೋಣೆಯೊಳಗೆ ಅನುಷ್ಟಾನಗೊಳಿಸಲು ಮುಂದಾಗಬೇಕು. ಶೈಕ್ಷಣಿಕ ವ್ಯವಸ್ಥೆಯ ಮುಂದಿನ ಹಂತಗಳಲ್ಲಿನ ಯಾರೂ ಸಹ ಪ್ರಾಥಮಿಕ ಶಾಲೆಗಳ ಶಿಕ್ಷಕರತ್ತ ಬೊಟ್ಟುಮಾಡಿ ತೋರಿಸದಂತೆ ಮಕ್ಕಳು ಕಲಿಕೆಯಲ್ಲಿ ಪ್ರಭುತ್ವ ಸಾಧಿಸುವಂತೆ ನೋಡಿಕೊಳ್ಳಬೇಕು. ಇಲಾಖೆಯ ಮಾರ್ಗಸೂಚಿಗಳ ಅನುಸಾರ ಶಿಕ್ಷಕರು ಕೆಲಸ ನಿರ್ವಹಿಸಬೇಕು ಎಂದರು.


ಇದೇ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ. ನಿರ್ದೇಶಕಿ. ಪವಿತ್ರಚನ್ನೇಗೌಡ. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಸ್.ಮಹೇಶ್. ನಂದೀಶ್. ನಾಗೇಂದ್ರ. ಕೇಶವ. ಧರ್ಮೇಂದ್ರ. ಸಂಪನ್ಮೂಲ ವ್ಯಕ್ತಿ ಶ್ವೇತ. ಆಶಾ. ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು ಹಾಜರಿದ್ದರು.