Home ಜಿಲ್ಲೆ ಮಂಗಳೂರು ಎರಡು ಕಡೆ ಪೊಲೀಸರ ದಾಳಿ; ೯ ಮಂದಿ ಬಂಧನ ಗಾಂಜಾ, ಮೆಥಾಂಫೆಟಮೈನ್, ಕಾರು-ಸ್ಕೂಟರ್, ನಗದು ಸೇರಿ-೧೬.೦೧...

ಎರಡು ಕಡೆ ಪೊಲೀಸರ ದಾಳಿ; ೯ ಮಂದಿ ಬಂಧನ ಗಾಂಜಾ, ಮೆಥಾಂಫೆಟಮೈನ್, ಕಾರು-ಸ್ಕೂಟರ್, ನಗದು ಸೇರಿ-೧೬.೦೧ ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಒಟ್ಟು ೯ ಮಂದಿಯನ್ನು ಬಂಧಿಸಲಾಗಿದ್ದು, ಗಾಂಜಾ, ಮೆಥಾಂಫೆಟಮೈನ್, ಎರಡು ಕಾರುಗಳು, ಸ್ಕೂಟರ್, ಮೊಬೈಲ್ ಫೋನ್‌ಗಳು ಹಾಗೂ ನಗದು ಸೇರಿದಂತೆ ಒಟ್ಟು ?೧೬,೦೧,೫೮೪ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರ್ವದಲ್ಲಿ ೮ ಮಂದಿ ಬಂಧನ
ಸೆ.೨೨ರಂದು ಮಧ್ಯಾಹ್ನ ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ಶುಭಕರ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಸಂಜೆ ೪.೩೫ರ ಸುಮಾರಿಗೆ ದಾಳಿ ನಡೆಸಲಾಯಿತು.
ಎರಡು ಕಾರು ಹಾಗೂ ಸ್ಕೂಟರ್‌ನಲ್ಲಿ ಬಂದಿದ್ದ ಕೆಲವರು ಮಾದಕ ವಸ್ತುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಮಾದಕ ವಸ್ತುಗಳನ್ನು ಹೊಂದಿರುವುದು ಪತ್ತೆಯಾಗಿದೆ.
ದಾಳಿಯಲ್ಲಿ ೧,೩೫೪.೨೮ ಗ್ರಾಂ ಗಾಂಜಾ (?೬೭,೭೧೪ ಮೌಲ್ಯ), ೩೨.೭೪ ಗ್ರಾಂ ಮೆಥಾಂಫೆಟಮೈನ್ (?೧,೩೦,೯೬೦ ಮೌಲ್ಯ), ಎರಡು ಕಾರುಗಳು, ಒಂದು ಸ್ಕೂಟರ್, ೯ ಮೊಬೈಲ್ ಫೋನ್‌ಗಳು, ಎರಡು ತೂಕದ ಯಂತ್ರಗಳು ಹಾಗೂ ?೭೫,೦೧೦ ನಗದು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ವಾಹನಗಳಲ್ಲಿ ಏಂ-೨೦-ಒಊ-೦೭೬೪ ಕಾರು ?೬ ಲಕ್ಷ, ಏಂ-೨೦-ಒಇ-೯೩೦೭ ಕಾರು ?೪ ಲಕ್ಷ ಹಾಗೂ ಏಂ-೨೦-ಇಖಿ-೫೬೩೪ ಸ್ಕೂಟರ್ ?೨೫ ಸಾವಿರ ಮೌಲ್ಯದ್ದಾಗಿದೆ. ಮೊಬೈಲ್ ಫೋನ್‌ಗಳ ಮೌಲ್ಯ ?೯೩,೩೦೦ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ಅಲ್ನಾಜ್ @ ಮೊಹಮ್ಮದ್ ಅನಾಸ್, ಮೊಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮೊಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್ ಹಾಗೂ ಸಂತೋಷ್ ದೇವಾಡಿಗ ಅವರನ್ನು ಬಂಧಿಸಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೭೯/೨೦೨೬, ಎನ್‌ಡಿಪಿಎಸ್ ಕಾಯ್ದೆಯ ಕಲಂ ೮(ಃ), ೮(ಅ), ೨೦(b)(ii)(ಃ), ೨೨(ಛಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿರುವುದಾಗಿ ತನಿಖೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಮತ್ತೊಬ್ಬ ಆರೋಪಿ ಬಂಧನ
ಇದೇ ವೇಳೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ ಮೂರನೇ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ಸೆ.೨೩ರಂದು ಮಧ್ಯರಾತ್ರಿ ೧೨.೧೦ಕ್ಕೆ ಪೊಲೀಸರು ದಾಳಿ ನಡೆಸಿದರು. ಉಡುಪಿ ನಗರ ಠಾಣೆಯ ಪಿಎಸ್‌ಐ ಕಾ.ಸು. ಭರತೇಶ್ ಕಂಕಣವಾಡಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಶ್ರೀವತ್ಸ ಕೆ.ಜಿ. (೩೧) ಎಂಬಾತನನ್ನು ಬಂಧಿಸಲಾಗಿದೆ. ಆತನ ವಶದಿಂದ ೧ ಕೆಜಿ ೬೫೯.೯೧ ಗ್ರಾಂ ಗಾಂಜಾ (ಅಂದಾಜು ?೮೩ ಸಾವಿರ ಮೌಲ್ಯ), ?೧,೨೬,೫೦೦ ನಗದು ಹಾಗೂ ಗಾಂಜಾ ತೂಕ ಮಾಡಲು ಬಳಸುತ್ತಿದ್ದ ಡಿಜಿಟಲ್ ಸ್ಕೇಲ್ ಸೇರಿದಂತೆ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.
ಕೆಲ ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣ
ಬಂಧಿತರ ಪೈಕಿ ಸ್ಟ್ಯಾನ್ಲಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮೊಹಮ್ಮದ್ ಫೈಜಲ್ ವಿರುದ್ಧ ಮಲ್ಪೆ, ಕಾರ್ಕಳ ಗ್ರಾಮಾಂತರ ಹಾಗೂ ಮಣಿಪಾಲ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳಿವೆ.ಇಮ್ತಿಯಾಜ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮೂರು, ಬ್ರಹ್ಮಾವರ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಮಲ್ಪೆ ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಮೂರು ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಅಜಯ್ ಕುಮಾರ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ, ಮಣಿಪಾಲ ಹಾಗೂ ಶಿರ್ವ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳಿವೆ. ಸಂತೋಷ್ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಎರಡು ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ.
ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ
ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್.ಪಿ. ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಶಿರ್ವ ಠಾಣೆಯ ಪಿಎಸ್‌ಐ ಅನಿಲ್, ಕಾಪು ಠಾಣೆಯ ಪಿಎಸ್‌ಐ ಶುಭಕರ, ಎಎಸ್‌ಐ ಸುದೇಶ್, ಸಿಬ್ಬಂದಿಗಳಾದ ಸುಂದರಗೌಡ, ಮಂಜುನಾಥ, ಹರ್ಷ, ಅರುಣ, ನಾಗರಾಜ, ಶರಣ, ಕಿಶೋರ್, ಸೆನ್ ಠಾಣೆಯ ಪ್ರವೀಣ್, ದೀಕ್ಷಿತ್, ಮಣಿಪಾಲ ಠಾಣೆಯ ವಿಶ್ವಜಿತ್, ಉಡುಪಿ ನಗರ ಠಾಣೆಯ ಪಿಎಸ್‌ಐ ಭರತೇಶ್ ಕಂಕಣವಾಡಿ, ಪಿಎಸ್‌ಐ ಪ್ರಕಾಶ್, ಸಿಬ್ಬಂದಿಗಳಾದ ಬಶೀರ್ ಅಹ್ಮದ್, ಆನಂದ ಗಾಣಿಗ ಸೇರಿದಂತೆ ಇತರ ಸಿಬ್ಬಂದಿ ಹಾಗೂ ಸಿಒಕೊ ಅಧಿಕಾರಿಗಳು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.