ಎನ್.ಎಸ್.ಎಸ್ ಘಟಕದ ವತಿಯಿಂದ ರಕ್ತಪರಿಶೀಲನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.04:  ನಗರದ ಶ್ರಿ ಗುರುತಿಪ್ಪೇರುದ್ರ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್ ನ ‘ಎ’ ಮತ್ತು ‘ಬಿ’ ಘಟಕದ ವತಿಯಿಂದ ಹಾಗು ಶ್ರೀಮದ್ ರಾಮಚಂದ್ರ ಆಸ್ಪತ್ರೆ ಮತ್ತು ಸಂಶೋದನ ಕೇಂದ್ರ ಗುಜರಾತ್, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ, ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಶ್ರೀ ಮಾತೃ ಮಹಿಳಾ ಮಂಡಳಿ ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತಪಾಸಣ ಶಿಬಿರ ಮತ್ತು ರಕ್ತ ಪರಿಶೀಲನೆ ಹಾಗು ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮವನ್ನು ಎಸ್.ಜಿ.ಟಿ ಶಾಲೆಯ ಮಕ್ಕಳಿಗೆ, ಶಿಕ್ಷಕರುಗಳಿಗೆ ಮತ್ತು ಪದವಿ ಉಪನ್ಯಾಸಕರುಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸುಮಾರು 950 ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮತ್ತು ರಕ್ತಪರಿಶೀಲನೆಗೆ ಒಳಪಟ್ಟರು.

ಈ ಕಾರ್ಯಕ್ರಮವನ್ನು ಎಸ್.ಜಿ.ಟಿ ಎನ್.ಎಸ್.ಎಸ್ ‘ಎ’ ಘಟಕದ ಕಾರ್ಯಕ್ರಮಾಧಿಕಾರಿಯಾದ ಪಿ.ವಿ.ನಾಗರಾಜ ಹಾಗು ‘ಬಿ’ ಘಟಕದ ಕಾರ್ಯಕ್ರಮಾಧಿಕಾರಿಯಾದ ಜಿ.ಶಶಿಧರ ಇವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು, ಶ್ರೀ ಮಾತೃ ಮಹಿಳಾ ಮಂಡಳಿ ಬಳ್ಳಾರಿಯ ತಪಾಸಣಾ ಅಧಿಕಾರಿಯಾದ ಚಂದ್ರಶೇಖರ್, ಹರೀಶ್ ಮತ್ತು ಸುರೇಶ್ ಉತ್ತಮ ಸಹಯೋಗ ನೀಡಿದರು.

ಎಸ್.ಜಿ.ಟಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಎನ್. ರುದ್ರಪ್ಪ, ಕಾರ್ಯದರ್ಶಿಗಳಾದ ಜಿ. ನಾಗರಾಜ್ ಪ್ರಾಚಾರ್ಯರಾದ ಆರ್ ರೀನಾ,  ಶಾಲಾ ನಿರ್ದೇಶಕಿಯಾದ ಜಿ. ಮಂಜುಳ ಮತ್ತು ಕಾಲೇಜು ಸಿಬ್ಬಂದಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.