Home ಜಿಲ್ಲೆ ಬೆಂಗಳೂರು ಎನ್‍ಯು ಹಾಸ್ಪಿಟಲ್ಸ್‍ನಿಂದ ಮೂರು ನೂತನ ಉಪಕ್ರಮಗಳ ಅನಾವರಣ

ಎನ್‍ಯು ಹಾಸ್ಪಿಟಲ್ಸ್‍ನಿಂದ ಮೂರು ನೂತನ ಉಪಕ್ರಮಗಳ ಅನಾವರಣ

ಬೆಂಗಳೂರು, ಅ. 30: ಯೂರಾಲಜಿ, ಕಿಡ್ನಿ ಆರೈಕೆ, ಫಲವತ್ತತೆ ಮತ್ತು ಕಿಡ್ನಿ ಕಸಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಎನ್‍ಯು ಹಾಸ್ಪಿಟಲ್ಸ್, ರೋಗಿ-ಕೇಂದ್ರಿತ ಆರೋಗ್ಯ ಸೇವೆಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಮೂರು ನೂತನ ಉಪಕ್ರಮಗಳಿಗೆ ಚಾಲನೆ ನೀಡಿದೆ.


ಆಸ್ಪತ್ರೆಯ ವತಿಯಿಂದ ಅತ್ಯಾಧುನಿಕ ಎಎಮ್‍ಎಸ್ ಎಡ್ಜ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್, ಎನ್‍ಯು ಆ?ಯಪ್ ಹಾಗೂ ದಿ ಲಿಂಕ್ 2024-26' ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಯ ಸಮನ್ವಯವು ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದರು. ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯು ಸಂಕೀರ್ಣ ಶಸ್ತ್ರಚಿಕಿತ್ಸೆಗಳಲ್ಲಿ ಹೆಚ್ಚಿನ ನಿಖರತೆ ಮತ್ತು ನಿಯಂತ್ರಣಕ್ಕೆ ನೆರವಾಗಲಿದ್ದು, ರೋಗಿಗಳ ಚೇತರಿಕೆಗೆ ಸಹಕಾರಿಯಾಗಲಿದೆ. ಎನ್‍ಯು ಆ?ಯಪ್ ಮೂಲಕ ವೈದ್ಯರ ಅಪಾಯಿಂಟ್‍ಮೆಂಟ್, ಆನ್‍ಲೈನ್ ಪಾವತಿ, ವೈದ್ಯಕೀಯ ವರದಿಗಳು, ಔಷಧಿಗಳ ಆರ್ಡರ್ ಹಾಗೂ ಲ್ಯಾಬ್ ಪರೀಕ್ಷೆಗಳಂತಹ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ದಿ ಲಿಂಕ್ 2024-26′ ಸಂಚಿಕೆಯು ಆಸ್ಪತ್ರೆಯ ಸಾಧನೆಗಳು, ಭವಿಷ್ಯದ ಯೋಜನೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ದಾಖಲಿಸಿದೆ.
ಎನ್‍ಯು ಹಾಸ್ಪಿಟಲ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಸನ್ನ ವೆಂಕಟೇಶ್ ಎಂ.ಕೆ. ಮತ್ತು ಅಧ್ಯಕ್ಷ ಡಾ. ವೆಂಕಟೇಶ್ ಕೃಷ್ಣಮೂರ್ತಿ ಅವರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಕರುಣಾಪೂರ್ಣ ಆರೈಕೆ ಒದಗಿಸುವುದು ಸಂಸ್ಥೆಯ ಆದ್ಯತೆಯಾಗಿದೆ ಎಂದು ತಿಳಿಸಿದರು.


ಆಸ್ಪತ್ರೆಯು ಈವರೆಗೆ 750ಕ್ಕೂ ಹೆಚ್ಚು ಕಿಡ್ನಿ ಕಸಿ, 200ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ 50ಕ್ಕೂ ಅಧಿಕ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, 12 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದೆ.