
ಸುಳ್ಯ:ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶನಾಲಯ ನ. ೫ ರಿಂದ ೧೪ ರವರೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆಯುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಮತ್ತು ಸಾಹಸ ಶಿಬಿರದಲ್ಲಿ ಭಾಗವಹಿಸುವ ಮಂಗಳೂರು ವಿ.ವಿ ತಂಡಕ್ಕೆ ಬೆಳ್ಳಾರೆ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕಿ ಮೋಕ್ಷ ಕೆ. ವಿ. ಆಯ್ಕೆಯಾಗಿದ್ದಾರೆ. ಇವರು ಉಬರಡ್ಕ ಮಿತ್ತೂರು ಗ್ರಾಮದ ಕೂಟೇಲು ವೆಂಕಪ್ಪ ಗೌಡ ಮತ್ತು ಪೂರ್ಣಿಮಾ ದಂಪತಿ ಪುತ್ರಿ.

































