
ಸುಳ್ಯ:ಇತಿಹಾಸ ಪ್ರಸಿದ್ಧ ಕಾರಣಿಕ ದೈವಿಗಳಾದ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವ ಬುಧವಾರ ವಿಜೃಂಭಣೆಯಿಂದ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.
ಬುಧವಾರ ಎಣ್ಮೂರು ಕಟ್ಟಬೀಡುನಲ್ಲಿ ಬೈದರುಗಳ ದರ್ಶನ, ಬಳಿಕ ಎಣ್ಮೂರು ಕಟ್ಟಬೀಡು ನಿಂದ ಭಂಡಾರ ಬಂದು ಗರಡಿಯಲ್ಲಿ ದರ್ಶನ ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಬೈದರುಗಳು ಗರಡಿ ಇಳಿದು. ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ-ದರ್ಶನ, ಪ್ರಾತಃಕಾಲ ಎಣ್ಮೂರು ಕಟ್ಟಬೀಡಿಗೆ ಹಾಲು ಕುಡಿಯಲು ಬಂದು, ಬೀಡಿಗೆ ಕಾಣಿಕೆ ಅರ್ಪಣೆ ನಡೆಯಿತು. ಬೆಳಿಗ್ಗೆ ಕೋಟಿ ಚೆನ್ನಯರ ದರ್ಶನ, ರಂಗ ಸ್ಥಳದಲ್ಲಿ (ಸೇಟು) ಬೈದೆರುಗಳ ಸೇಟು ನಡೆದ ಬಳಿಕ ಬೈದರುಗಳಲ್ಲಿ ಅರಿಕೆ ಗಂದ ಪ್ರಸಾದ ಮತ್ತು ತುಲಾಭಾರ ಕಾರ್ಯಕ್ರಮ ನಡೆಯಿತು.

























