
ಸುಳ್ಯ:ಎಣ್ಮೂರು ಪ್ರೌಢಶಾಲೆಯಲ್ಲಿ ನೂತನ ಸಭಾಭವನಕ್ಕೆ ಗುದ್ದಲಿ ಪೂಜೆ ನಡೆಯಿತು.
ಅಲೆಕ್ಕಾಡಿಯ ಉದ್ಯಮಿ ಸುದೇಶ್ ರೈ ನೂತನ ಸಭಾಭವನಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಪದ್ಮನಾಭ ರೈ ಎಂಜೀರು, ಉದ್ಯಮಿ ತಿಮ್ಮಪ್ಪ ರೈ ಬಜದಗುತ್ತು, ನೂತನ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಅಶೋಕ್ ಮೇಲ್ಪಾಡಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಯತೀಂದ್ರನಾಥ ರೈ , ಮುಖ್ಯ ಶಿಕ್ಷಕ ಟೈಟಸ್ ವರ್ಗಿಸ್, ಎಸ್.ಡಿ.ಎಂ.ಸಿ ಸದಸ್ಯರಾದ ನಾಗಪ್ಪ ಗೌಡ, ರಾಜೇಶ್ ಪಲ್ಲೋಡಿ , ಶಾಲಿನಿ, ನಳಿನಾಕ್ಷಿ, ಸುವರ್ಣ ಜಾಕೆ, ಶರ್ಮ ಕುಮಾರ್, ತಾಯಂದಿರ ಸಮಿತಿ ಅಧ್ಯಕ್ಷೆ ನಯನ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಪಟ್ಟೆ, ಶಾಲಾ ಹಿರಿಯ ಶಿಕ್ಷಕಿ ಕವಿತಾ ಡಿ.ಎಂ , ಶಾಲಾ ವಿದ್ಯಾರ್ಥಿ ನಾಯಕ ಲೇಖನ್ ಎ. ಅಲೆಂಗಾರ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ವೆಂಕಪ್ಪ ಗೌಡ ಆಲಾಜೆ ಸ್ವಾಗತಿಸಿ, ಮುಖ್ಯ ಶಿಕ್ಷಕ ಟೈಟಸ್ ವರ್ಗಿಸ್ ವಂದಿಸಿದರು. ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು, ಚಿತ್ರಕಲಾ ಶಿಕ್ಷಕ ಮೋಹನ ಗೌಡ ಏನಾಜೆ ಕಾರ್ಯಕ್ರಮ ಸಂಯೋಜಿಸಿದರು.































