ಎಚ್.ಎಸ್.ನಂಜುಂಡಪ್ರಸಾದ್ ಅವರಿಗೆ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.16-
ಚಾಮರಾಜನಗರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಚಾಮುಲ್ ನಿರ್ದೇಶಕರು ಅದ ಎಚ್.ಎಸ್. ನಂಜುಂಡ ಪ್ರಸಾದ್ ರವರಿಗೆ 2025 ನೇ ಸಾಲಿನ ‘ಕರ್ನಾಟಕ ಸಹಕಾರ ರತ್ನ ‘ಪ್ರಶಸ್ತಿ ಲಭಿಸಿದೆ. ಇಂದು ಬೆಂಗಳೂರಿನಲ್ಲಿ ನಡೆಯುವ ಸಹಕಾರ ಸಪ್ತಾಹ ಉದ್ಗಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.


ಚಾಮರಾಜನಗರ ಜಿಲ್ಲೆಯಲ್ಲಿ ಅವರು ಸಹಕಾರ ಕ್ಷೇತ್ರದ ಬೆಳವಣಿಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ಸರ್ಕಾರ ಈ ಪ್ರಶಸ್ತಿಯನ್ನು ನಂಜುಂಡ ಪ್ರಸಾದ್ ಅವರಿಗೆ ಘೋಷಣೆ ಮಾಡಿದೆ. ಚಾಮುಲ್ ಅಧ್ಯಕ್ಷರಾಗಿ ಹಾಗೂ ಕೆಎಂಎಫ್ ನಿರ್ದೇಶಕರಾಗಿ ಮತ್ತು 2ನೇ ಬಾರಿ ಚಾಮುಲ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಸನ್ಮಾನಿಸಲಾಸಲಿದ್ದಾರೆ.


ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅಲ್ಲದೇ ಹಾಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಜಿ ಸಹಕಾರ ಸಚಿವರು ಹಾಗೂ ಗುಂಡ್ಲುಪೇಟೆ ಶಾಸಕರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಸಹೋದರಾಗಿರುವ ನಂಜುಂಡಪ್ರಸಾದ್ ಅವರು ಮಹದೇವಪ್ರಸಾದ್ ಅವರು ಕ್ಷೇತ್ರದಲ್ಲಿ ಶಾಸಕರಾಗಿ ಉತ್ತಮ ಸೇವೆ ಸಲ್ಲಿಸುವಲ್ಲಿ ಸಹೋದರ ನಂಜುಂಡಪ್ರಸಾದ್ ಅವರ ಶ್ರಮ ಬಹಳ ಇತ್ತು. ಅಣ್ಣನ ಮಾತಿನಂತೆ ಅವರ ಹೆಜ್ಜೆಗೆ ಹೆಜ್ಜೆ ಹಾಕುತ್ತಾ, ಸಹಕಾರ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದರು. ಮಹದೇವಪ್ರಸಾದ್ ಅಕಾಲಿಕ ನಿಧನದ ಬಳಿಕ ಗೀತಾ ಮಹದೇವಪ್ರಸಾದ್ ಅವರನ್ನು ಗೆಲ್ಲಿಸಿ, ಶಾಸಕರು ಹಾಗೂ ಸಚಿವರನ್ನಾಗಿ, ನಂತರ ಅವರ ಪುತ್ರ ಎಚ್.ಎಂ. ಗಣೇಶ್ ಪ್ರಸಾದ್ ಅವರನ್ನು ಶಾಸಕರನ್ನಾಗಿ ಮಾಡುವಲ್ಲಿ ನಂಜುಂಡಪ್ರಸಾದ್ ಶ್ರಮ ವಹಿಸಿದ್ದರು. ಚಾಮುಲ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನೀಡುವ ಜೊತೆಗೆ ದಿ. ಮಹದೇವಪ್ರಸಾದ್ ಅವರ ಕನಸು ನೆನಸು ಮಾಡುವಲ್ಲಿ ಹಾಗು ಸಹಕಾರ ಕ್ಷೇತ್ರವನ್ನು ಜಿಲ್ಲೆಯಲ್ಲಿ ವಿಸ್ತರಣೆ ಮಾಡುವಲ್ಲಿ ಅವರ ಸೇವೆ ಹೆಚ್ಚಿನದ್ದಾಗಿದೆ.