
ಮಂಗಳೂರು, ಮೇ ೯: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ೧೧೪ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಶ್ರೀ ಪಿ.ಎಫ್.ಎಕ್ಸ್.ಸಾಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿ ಹಾಗೂ ಸ್ಥೈರ್ಯವನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು.ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆವ್. ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ, ಕರ್ನಾಟಕ ಬ್ಯಾಂಕ್‌ನ ಮಾಜಿ ಮಹಾಪ್ರಬಂಧಕ ಹಾಗೂ ಮುಖ್ಯ ಅನುಸರಣಾಕಾರಿ ಡಾ| ಮೀರಾ ಅರನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಶ್ರೀ ರಾಯ್ ಕ್ಯಾಸ್ಟೆಲಿನೋ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಶ್ರೀ ಐಸಾಕ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಂಸ್ಥಾಪಕರ ಕುಟುಂಬ ಸದಸ್ಯರು ದಿವಂಗತ ಶ್ರೀ ಪಿ.ಎಫ್.ಎಕ್ಸ್.ಸಾಲ್ದಾನ್ಹ ಅವರ ಭಾವಚಿತ್ರಕ್ಕೆ ಪುಷ್ಪ್ಪನಮನಸಲ್ಲಿಸಿ ಗೌರವಸಲ್ಲಿಸಿದರು.
ಸ್ವಾಗತ ಭಾಷಣದಲ್ಲಿ ಅಧ್ಯಕ್ಷರಾದಶ್ರೀ ಅನಿಲ್‌ಲೋಬೊ ಅವರು, ಸಂಸ್ಥಾಪಕರ ದೃಷ್ಟಿಕೋನ ಮತ್ತು ಧ್ಯೇಯವನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.೨೦೧೮ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.ಬ್ಯಾಂಕಿನ ಪ್ರಗತಿಯನ್ನು ವಿವರಿಸಿದ ಅವರು, ೨೪ ವರ್ಷಗಳಬಳಿಕಶಾಖೆಗಳಸಂಖ್ಯೆ ೧೬ರಿಂದ ೨೧ಕ್ಕೆ ಏರಿಕೆಯಾಗಿದೆ ಎಂದುಹೇಳಿದರು.ಬ್ಯಾಂಕಿನ ಒಟ್ಟುವ್ಯವಹಾರ ರೂ.೫೦೦ ಕೋಟಿಯಿಂದ ರೂ.೧,೫೨೫ ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು ರೂ.೩೦೦ ಕೋಟಿಯಿಂದ ರೂ.೮೭೫ ಕೋಟಿಗೆಹೆಚ್ಚಳವಾಗಿವೆ ಎಂದರು. ಬ್ಯಾಂಕ್ ರೂ.೧೩ ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ “ಎ” ದರ್ಜೆಯಲೆಕ್ಕಪರಿಶೋಧನಾವರ್ಗೀಕರಣವನ್ನುಪಡೆಯುತ್ತಿದೆ ಎಂದು ತಿಳಿಸಿದರು.ಪ್ರಸ್ತುತ ಇರುವ ೨೧ ಶಾಖೆಗಳನ್ನು ಈ ಆರ್ಥಿಕವರ್ಷದಲ್ಲಿ ೨೫ಕ್ಕೆವಿಸ್ತರಿಸುವ ಯೋಜನೆಯನ್ನೂ ಘೋಷಿಸಿದರು.
ತಮ್ಮ ಭಾಷಣದಲ್ಲಿವಂ.ಡಾ|ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರ ನಾಯಕತ್ವವನ್ನು ಶ್ಲಾಘಿಸಿ, ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿಸಾಧಿಸಿರುವಪರಿವರ್ತನೆಯನ್ನುಮೆಚ್ಚಿದರು.ಆರ್ಥಿಕವಾಗಿ ಹಿಂದುಳಿದವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣಕ್ಕಾಗಿ ನೆರವಾಗುವ“ವಿದ್ಯಾಧನವಿದ್ಯಾರ್ಥಿ ಕ್ರೆಡಿಟ್ ಯೋಜನೆ”ಯನ್ನು ವಿಶೇಷವಾಗಿ ಪ್ರಶಂಸಿಸಿದರು.ಎಂಸಿಸಿಬ್ಯಾಂಕ್‌ಸಾಮಾಜಿಕಹೊಣೆಗಾರಿಕೆಯನ್ನುನಿಭಾಯಿಸುವ ಜನಪರಬ್ಯಾಂಕಾಗಿ ಹೊರಹೊಮ್ಮಿದೆ ಎಂದುಹೇಳಿದರು.
ಡಾ| ಮೀರಾ ಅರನ್ಹಾ ಅವರು “ವಿದ್ಯಾಧನಶಿಕ್ಷಣ ಯೋಜನೆ”ಯನ್ನು ಉದ್ಘಾಟಿಸಿದರು.ತಮ್ಮಭಾಷಣದಲ್ಲಿ ಕಳೆದ ಏಳು-ಎಂಟುವರ್ಷಗಳಲ್ಲಿಬ್ಯಾಂಕ್‌ಸಾಧಿಸಿರುವ ಪ್ರಗತಿಯನ್ನು ಅಭಿನಂದಿಸಿದ ಅವರು, ಬ್ಯಾಂಕಿನ ಭವಿಷ್ಯಬೆಳವಣಿಗೆಯಲ್ಲಿ ಕೃತಕಬುದ್ಧಿಮತ್ತೆ, ಹವಾಮಾನಹಾಗೂಇSಉ ಅಪಾಯನಿರ್ವಹಣೆಮತ್ತುವಿಶ್ವಾಸದ ಕಾಪಾಡುವಿಕೆಪ್ರಮುಖ ಪಾತ್ರವಹಿಸಲಿದೆ ಎಂದುಹೇಳಿದರು.
ಶ್ರೀ ರಾಯ್ ಕ್ಯಾಸ್ಟೆಲಿನೋ ಅವರು ಕೇವಲ ಏಳು ವರ್ಷಗಳಲ್ಲಿ ಬ್ಯಾಂಕ್ ಮೂರು ಪಟ್ಟು ಬೆಳವಣಿಗೆ ಸಾಧಿಸಿರುವುದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.
ಶ್ರೀ ಐಸಾಕ್ ವಾಸ್ ಅವರು ಸಂಪಾದಕರಾದ ಡಾ.ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆ ಮಾಡಿದರು.ತಮ್ಮ ಭಾಷಣದಲ್ಲಿಸಂಸ್ಥಾಪಕರುಬ್ಯಾಂಕನ್ನುಸಮುದಾಯದ ವಿಶ್ವಾಸದ ಸಂಕೇತವಾಗಿ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ಸ್‌ಗಳಾದ ಸಿಎ ಮ್ಯೂರಿಯಲ್ ಮಸ್ಕರೇನ್ಹಾಸ್ ಹಾಗೂ ಸಿಎ ಜಾಯ್ಸ್ಟನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಹೆನ್ರಿ ಮೆಂಡೋನ್ಕಾ (ಎಚ್.ಎಂ.ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಿಶೆಲ್ ಫೆನಾಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಜೋಸೆಫ್ ಲೋಬೊ, ಶ್ರೀ ಝೇವಿಯರ್ ಡಿಸೋಜಾ ಮತ್ತು ಶ್ರೀ ಪ್ರೇಮ್ ಜೆ.ಮೊರಾಸ್ ಅವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ಶ್ರೀ ರೋಶನ್ ಡಿಸೋಜಾಹಾಗೂಶ್ರೀ ಅನಿಲ್ ಪತ್ರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು.ಬ್ಯಾಂಕಿನ ಹೊಸ ಲೋಗೋ ವಿನ್ಯಾಸಗೊಳಿಸಿದ ಶ್ರೀ ಬನ್ನು ಫೆನಾಂಡಿಸ್ ಹಾಗೂ ಪಿಎಫ್‌ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ಶ್ರೀ ದೀಪಕ್ ಡಿಸೋಜಾ ಅವರನ್ನು ಸಹ ಗೌರವಿಸಲಾಯಿತು.
ಕಾರ್ಯಕ್ರಮವು ಶ್ರೀ ಮನೋಜ್ ಲೋಪೆಸ್ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮೆನೆಜಸ್ ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮವನ್ನು ಶ್ರೀ ಜೇಸನ್ ಶಿರ್ತಾಡಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಆಂಡ್ರೂ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತೋರೊ, ಶ್ರೀ ಅನಿಲ್ ಪತ್ರಾವೊ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಜೆ.ಪಿ.ರೋಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಶ್ರೀಮೆಲ್ವಿನ್‌ವಾಸ್, ಶ್ರೀವಿನ್ಸೆಂಟ್‌ಲಸ್ರಾದೊ, ಶ್ರೀಸುಶಾಂತ್‌ಸಾಲ್ದಾನ್ಹಾ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಆಲ್ವಿನ್‌ಪಿ.ಮೊಂತೇರೊ, ಶ್ರೀ ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಹಾಗೂ ಶ್ರೀ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.

























