ಎಂಡಿಪಿಎ ವತಿಯಿಂದ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.01:-
ಮೈಸೂರು ಡಿಸೈನರ್ಸ್ ಮತ್ತು ಪ್ರಿಂಟರ್ಸ್ ಅಸೋಸಿಯೇಷನ್ [ಎಂಡಿಪಿಎ] ವತಿಯಿಂದ ಭಾನುವಾರ ಕೃಷ್ಣಮೂರ್ತಿಪುರಂ ಬಿಎಸ್‍ಎಸ್ ವಿದ್ಯೋದಯ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.


ಇದೇ ಸಂದರ್ಭದಲ್ಲಿ ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನೃತ್ಯಗುರು ಪೆÇ್ರ.ಕೆ. ರಾಮಮೂರ್ತಿ ರಾವ್, ಕಳೆದ ಬಾರಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಎಂಡಿಪಿಎ ಮಾಜಿ ಅಧ್ಯಕ್ಷರಾದ ಆರ್. ವಾಸುದೇವ ಭಟ್, ಎಂ.ಎಸ್. ರುದ್ರಸ್ವಾಮಿ, ಕೌಶಲ್ಯ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಪ್ರಮಥ ಮಂಜುನಾಥ್ ಅವರನ್ನು ಗೌರವಿಸಲಾಯಿತು.


ಎಂ.ಎಸ್. ರಾಮಚಂದ್ರ, ಎಂ.ಎಸ್. ಹರ್ಷ, ಡಿ.ಎಸ್. ಮಹದೇವ, ರಾಮನಾಥಗುಪ್ತ, ಪ್ರಕಾಶ್,ಮಂಜುನಾಥ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು ಮೊದಲಾದವರು ಇದ್ದರು. ಮಂಜುಳಾ ಸ್ವಾಗತಿಸಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.