Home ಜಿಲ್ಲೆ ಮಂಗಳೂರು ಉದ್ಯೋಗ ಭರ್ತಿ; ಬಜೆಟ್‌ನಲ್ಲಿ ಘೋಷಣೆ: ಸಿಎಂ ಸಿದ್ದರಾಮಯ್ಯ

ಉದ್ಯೋಗ ಭರ್ತಿ; ಬಜೆಟ್‌ನಲ್ಲಿ ಘೋಷಣೆ: ಸಿಎಂ ಸಿದ್ದರಾಮಯ್ಯ

ಕಾರ್ಕಳ-ಯುವಜನತೆಗೆ ಉದ್ಯೋಗ ನೀಡುವುದು ರಾಜ್ಯ ಸರಕಾರದ ಪ್ರಮುಖ ಭರವಸೆಗಳಲ್ಲಿ ಒಂದು ಒಳ ಮೀಸಲಾತಿಯ ಕಾರಣದಿಂದಾಗಿ ಅದನ್ನು ಈವರೆಗೆ ಪೂರೈಸಲು ಆಗಿಲ್ಲ. ಈಗ ಈ ಕೆಲಸವನ್ನು ಪ್ರಾರಂಭಿಸಿ ದ್ದೇವೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡುತ್ತೇವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಕಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದರು. ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಮಂಗಳವಾರ ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಕುರಿತು ಪ್ರಶ್ನಿಸಿದಾಗ ಸಿದ್ದರಾಮಯ್ಯ ಉತ್ತರಿಸಿದರು.
ಉದ್ಯೋಗ ಕೊಡಬೇಕು ಅನ್ನೋದು ನಮ್ಮಭರವಸೆ. ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಯುವಕರಿಗೆ ಉದ್ಯೋಗ ಕೊಡುತ್ತೇವೆ. ಒಳ ಮೀಸಲಾತಿ ಕಾರಣದಿಂದ ಈ ಕೆಲಸ ಆಗಿಲ್ಲ. ಈಗ ಆ ಕೆಲಸ ಪ್ರಾರಂಭ ಮಾಡಿ ದ್ದೇವೆ. ಬಜೆಟ್ಟಿನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ. ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ ಎಂದರು.
ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮ: ರಾಜ್ಯದಲ್ಲಿ ಮಾದಕ ದ್ರವ್ಯಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಮೂಲಕ ರಾಜ್ಯವನ್ನು ಡ್ರಗ್ ಮುಕ್ತಗೊಳಿಸುವುದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಶಿವಮೊಗ್ಗ ಹಾಗೂ ಉತ್ತರ ಕನ್ನಡ ದಲ್ಲಿ ಇತ್ತೀಚಿನ ಪ್ರಕರಣಗಳ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಯ ಹಾವಳಿ ಹೆಚ್ಚಳವಾಗಿದೆ. ಇದನ್ನು ಕಡಿಮೆ ಮಾಡಲೇಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಆದರೆ ಈವರೆಗೆ ನಾವು ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಪಡೆದಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಪ್ರಕರಣಗಳು ಗಾಂಜಾ ಮತ್ತು ಮಾದಕ ದ್ರವ್ಯಗಳ ವಿರುದ್ಧ ಪರಿಣಾಮಕಾಗಿ ಕ್ರಮ ಅಗತ್ಯವನ್ನು ಎತ್ತಿ ಹಿಡಿದಿವೆ. ಇಂಥ ಪ್ರಕರಣಗಳನ್ನು ಶೂನ್ಯಕ್ಕೆ ತರಬೇಕು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈವರೆಗೆ ಪ್ರಯತ್ನ ಸಂಪೂರ್ಣ ಸಫಲವಾಗಿಲ್ಲ ಎಂದರು
ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಯ ಹಾವಳಿ ಹೆಚ್ಚಳವಾಗಿದೆ. ಇದನ್ನು ಕಡಿಮೆ ಮಾಡಲೇಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಆದರೆ ಈವರೆಗೆ ನಾವು ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಪಡೆದಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಪ್ರಕರಣಗಳು ಗಾಂಜಾ ಮತ್ತು ಮಾದಕ ದ್ರವ್ಯಗಳ ವಿರುದ್ಧ ಪರಿಣಾಮಕಾಗಿ ಕ್ರಮ ಅಗತ್ಯವನ್ನು ಎತ್ತಿ ಹಿಡಿದಿವೆ. ಇಂಥ ಪ್ರಕರಣಗಳನ್ನು ಶೂನ್ಯಕ್ಕೆ ತರಬೇಕು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈವರೆಗೆ ಪ್ರಯತ್ನ ಸಂಪೂರ್ಣ ಸಫಲವಾಗಿಲ್ಲ ಎಂದರು.
ಶಾಸಕರ ಆಸೆ ತಪ್ಪಲ್ಲ: ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನಕ್ಕಾಗಿ ನಡೆಸುತ್ತಿರುವ ಪ್ರಯತ್ನದ ಕುರಿತು ಅವರನ್ನು ಪ್ರಶ್ನಿಸಿದಾಗ, ಇದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮಂತ್ರಿಗಳಾಗಬೇಕು ಅನ್ನುವುದು ತಪ್ಪಲ್ಲ. ಆದರೆ ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಸ್ಥಾನ ಕೊಡಬಾರದು ಎಂದು ನಿರ್ಣಯ ತೆಗೆದುಕೊಂಡಿದ್ದೇವೆ. ಇಷ್ಟಾದರೂ ಅವರು ಕೇಳ್ತಾ ಇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿದ್ದರಾಮಯ್ಯ ಮತ್ತೊಮ್ಮೆನುಡಿದರು.
ಗ್ಯಾರಂಟಿ ಯೋಜನೆಗಳು ಹೊರೆಯೇ?: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಹೊರೆ ಎಂಬ ಹೇಳಿಕೆ ಯೊಂದರ ಕುರಿತು
ಸಿದ್ದರಾಮಯ್ಯರನ್ನು ಕೇಳಿದಾಗ, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವರ್ಷಕ್ಕೆ ೫೨,೦೦೦ ಕೋಟಿಗಿಂತ ಜಾಸ್ತಿ ಹಣ ಬೇಕಾಗುತ್ತದೆ. ಅದನ್ನು ’ಬರ್ಡನ್ ಎಂದು ಹೇಳಿರಬಹುದು. ನಾವು ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆ ಎರಡನ್ನು ಒಟ್ಟಿಗೆ ಮುಂದುವರಿಸುತ್ತಿದ್ದೇವೆ ಎಂದವರು ಸ್ಪಷ್ಟಪಡಿಸಿದರು.
’ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹೈಕಮಾಂಡ್‌ಗೆ ತೆರಳುವ ವಿಚಾರದ ಕುರಿತು ಪ್ರಶ್ನಿಸಿದಾಗ, ನಾನು ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದು ನುಡಿದ ಸಿದ್ದರಾಮಯ್ಯ ಹೈಕಮಾಂಡ್ ಹೇಗೆ ಹೇಳುತ್ತದೆ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.
ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಮಾನವ-ಪ್ರಾಣಿಗಳ ನಡುವೆ ನಡೆದಿರುವ ಸಂಘರ್ಷದ ಕುರಿತು ಕೇಳಿದಾಗ, ಚಿಕ್ಕಮಗಳೂರಿನಲ್ಲಿ ಆನೆಗಳ ಸಂಖ್ಯೆ ಜಾಸ್ತಿಯಾಗಿದೆ. ರಾಜ್ಯದಲ್ಲಿ ಹುಲಿ, ಚಿರತೆ ಆನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಎಲ್ಲವೂ ಜನವಸತಿ ಪ್ರದೇಶಕ್ಕೆ ಬರುತ್ತಿದೆ ಎಂದರು.
ಇದರಿಂದಾಗಿ ಪ್ರಾಣಿ- ಮಾನವ ಸಂಘರ್ಷ ಏರ್ಪಡುತ್ತಿದೆ. ಈ ಬಾರಿ ತಡೆಬೇಲಿ, ಬ್ಯಾರಿಕೇಡ್ ಹಾಕುವ ಯೋಜನೆ, ಜಾರಿ ಮಾಡುತ್ತೇವೆ. ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೆಡ್ ಹಾಕುತ್ತೇವೆ. ತಡೆಗೋಡೆ ನಿರ್ಮಾಣ ಮಾತ್ರ ಇದಕ್ಕೆ ಪರಿಹಾರ. ಕಾಡಿನ ಅಂಚಿನಲ್ಲಿ ಬ್ಯಾರಿಕೇಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಹಾಕುವುದರ ಜೊತೆಗೆ ಕಾರ್ಯ ಪಡೆಯನ್ನೂ ರಚಿಸುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬೆಂಗಳೂರಿನಲ್ಲಿ ಅಜೀಮ್ ಪ್ರೇಮ್ಮಿ ವಿವಿ ಮೇಲೆ ಎಬಿವಿಪಿ ನಡೆಸಿದ ದಾಳಿ ಯನ್ನು ಖಂಡಿಸಿದ ಸಿಎಂ, ಕಾನೂನನ್ನು ಯಾರು ಕೈಗೆ ತೆಗೆದುಕೊಂಡರೂ ಬಿಡೋದಿಲ್ಲ ಎಬಿವಿಪಿ ಆಗಲಿ ಅಥವಾ ಬೇರೆ ಯಾರು ಕೂಡ ಇರಬಹುದು. ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಿನಾಕಾರಣ ಕಾನೂನು ಕೈಗೆ ತೆಗೆದುಕೊಳ್ಳುವಂತಿಲ್ಲ. ಅದನ್ನು ನಾವು ಸಹಿಸುವುದಿಲ್ಲ ಎಂದರು.
ಆಗುಂಬೆಯಲ್ಲಿ ಸುರಂಗ ಮಾರ್ಗಕ್ಕೆ ಸಮ್ಮತಿ
ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕುರಿತು ಕೇಂದ್ರ ಸರಕಾರದ ಚಿಂತನೆಗೆ ಪರಿಸರ ಹೋರಾಟಗಾರರು ವಿರೋಧ ಸೂಚಿಸಿರುವ ವಿಷಯದ ಬಗ್ಗೆ ಹಾಗೂ ರಾಜ್ಯ ಸರಕಾರದ ನಿಲುವಿನ ಕುರಿತು ಸಿದ್ದರಾಮಯ್ಯರನ್ನು ಪ್ರಶ್ನಿಸಿದಾಗ, ಆಗುಂಬೆಯಲ್ಲಿ ಸುರಂಗ ಮಾರ್ಗದ ಯೋಜನೆಗೆ ನಮ್ಮ ಸಮ್ಮತಿ ಇದೆ ಎಂದುತ್ತರಿಸಿದರು.
ಪರಿಸರವಾದಿಗಳಿಗೆ ಈ ವಿಚಾರದ ಕುರಿತು ಮನವರಿಕೆ ಮಾಡುತ್ತೇವೆ. ಪರಿಸರವಾದಿಗಳ ವಿರೋಧ ತಣಿಸುತ್ತೇವೆ. ಪರಿಸರವಾದಿಗಳು ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ತಿಳಿದುಕೊಳ್ಳುತ್ತೇವೆ. ಅವರ ಜೊತೆ ಮಾತನಾಡಿ ಪರಿಹಾರ ಮಾಡುತ್ತೇವೆ ಎಂದರು.
ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ವಿವಾದದ ಕುರಿತು ಮಾತನಾಡಿದ ಅವರು, ಆ ಯೋಜನೆ ಯನ್ನು ಪೂರ್ಣಗೊಳಿಸುತ್ತೇವೆ. ಇದರಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಆ ಯೋಜನೆ ಪೂರ್ಣ ಗೊಳಿಸುತ್ತೇವೆ ಎಂದುತ್ತರಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೂ ಈ ಬಗ್ಗೆ ದೂರು ಕೇಳಿಬಂದಿಲ್ಲ. ಯಾವುದೇ ಆಸ್ಪತ್ರೆಯಲ್ಲಿ ಸಮಸ್ಯೆ ಇಲ್ಲ ಎಂದರು.