Home ಜಿಲ್ಲೆ ಮಂಗಳೂರು ಉದ್ಯಮಿ ಶಶಿಕಲಾ ಪ್ರಭಾಕರನ್ ನಾಯರಿಗೆ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’

ಉದ್ಯಮಿ ಶಶಿಕಲಾ ಪ್ರಭಾಕರನ್ ನಾಯರಿಗೆ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’

ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮಹಿಳಾ ದಿನಾಚರಣೆ
ಸುಳ್ಯ:ಜೆಸಿಐ ಸುಳ್ಯ ಪಯಸ್ವಿನಿ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಸಮಾರಂಭ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.
ಸ್ವಾಗತ್ ಐಸ್ ಕ್ರೀಂ ಸಂಸ್ಥೆಯ ಮಾಲಕಿ ಶಶಿಕಲಾ ಪ್ರಭಾಕರನ್ ನಾಯರ್‌ರಿಗೆ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸಲಾಯಿತು.
ಸುಳ್ಯ ತಹಸೀಲ್ದಾರ್ ಮಂಜುಳಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಉದ್ಯಮ ನಡೆಸಲು ಹಲವು ಸವಾಲುಗಳು ಎದುರಾಗುತ್ತವೆ. ಎಲ್ಲಾ ಸವಾಲುಗಳನ್ನು ಮೀರಿ ಶಶಿಕಲಾ ಅವರು ಯಶಸ್ವಿಯಾಗಿರುವುದು ಶ್ಲಾಘನೀಯ. ಮತ್ತು ಅವರು ಸಮಾಜಕ್ಕೆ ಪ್ರೇರಣೆ” ಎಂದು ಹೇಳಿದರು.
ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಮಾತನ್ನಾಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ವಿಜಯ ಅಮೆಚೂರು ಉಪಸ್ಥಿತರಿದ್ದರು. ಉಮೇಶ್ ಬೊಳುಗಲ್ಲು ಜೇಸಿವಾಣಿ ವಾಚಿಸಿದರು. ವಿನೋದ್ ಮೂಡಗದ್ದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ತಾರಾ ಮಾಧವ ಚೂಂತಾರು ವಂದಿಸಿದರು.