
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.31: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಒಂದು ಕೋಟಿ ಜನರಿಂದ ಇಲ್ಲಿವರೆಗೆ ಸಹಿ ಸಂಗ್ರಹ ಆಗಿದೆ. ಇನ್ನು ಮುಂದೆ ಜನ ಪ್ರತಿನಿಧಿಗಳ ಸಹಿ ಸಂಗ್ರಹ ಮಾಡಲಿದೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಗೇಶ ಗೋಲಶೆಟ್ಟಿ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಜದ 15 ಜಿಲ್ಲೆಗಳಿಂದ ಕೂಡಿಸಿ ಉತ್ತರ ಕರ್ನಾಟಕ ಮಾಡಬೇಕಿದೆ. ಕಾರಣ ಈ ವರೆಗೆ ರಾಜ್ಯ ಸರ್ಕಾರದಿಂದ. ಅಭಿವೃದ್ಧಿಯಲ್ಲಿ ಆಗಿರುವ ಮಲತಾಯಿ ಧೋರಣೆಯಿಂದ ಎಂದರು. ಇದಕ್ಕೆ ಉತ್ತರ ಎಂದರೆ ಈಗ ಪ್ರಕಟವಾಗಿರುವ 74 ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಕೇವಲ 24 ಮಾತ್ರ ದೊರೆತಿವೆ. ಮಾಧ್ಯಮ ಕ್ಷೇತ್ರದ ನಾಲ್ಕು ಜನರಲ್ಲಿ ಉತ್ತರ ಕರ್ನಾಟಕದ ಒಬ್ವರಿಗೂ ಇಲ್ಲ ಎಂದರು.
ಕರ್ನಾಟಕ ಏಕೀಕರಣದ ಹೋರಟದ ಮೂಲಕ ಅಸ್ತಿತ್ವಕ್ಕೆ ಬಂದಿದೆ ಎಂಬ ಭಾವನಾತ್ಮಕ ಕಾರಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಕೆಲವರ ಬೆಂಬಲ ಇಲ್ಲ.
ರಾಜ್ಯವನ್ನು ಪ್ರತ್ಯೇಕಗೊಳಿಸುವ, ನಾಡನ್ನು ಒಡೆಯುವ ನಾಡ ದ್ರೋಹದ ಕೆಲಸ ಅಲ್ಲ ಅಪಾರ್ಥ ಮಾಡಿಕೊಳ್ಳದೆ ಮತ್ತೊಂದು ಕನ್ನಡ ನಾಡನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಾಗಿದೆ ನಮ್ಮ ಭಾಗದ ಯುವಕರು ವಿದ್ಯಾರ್ಥಿಗಳು ನಿರುದ್ಯೋಗಿಗಳು ರೈತರು ಮಹಿಳೆಯರು ಕಾರ್ಮಿಕರು ಎಲ್ಲ ವರ್ಗದ ಜನರು ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಬೇಕಾದರೆ ಉತ್ತರ ಕರ್ನಾಟಕವು ಪ್ರತ್ಯೇಕಗೊಂಡು ಹೊಸ ನಾಡು ನಿರ್ಮಾಣವಾಗಬೇಕಾಗಿದೆ ಎಂದರು.
ಈ ಭಾಗದ ಎಲ್ಲಾ ವರ್ಗದ ರಾಜಕಾರಣಿಗಳು ಜನಪ್ರತಿನಿಧಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ನಿಶ್ಚಿತ ಅಭಿಪ್ರಾಯವನ್ನು ನೀಡಿ ಸಹಿ ಸಂಗ್ರಹಣೆಗೆ ಸಹಕಾರ ನೀಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆಂದರು.
ಸುದ್ದಿಗೋಷ್ಟಿಯಲ್ಲಿ ಎನ್.ಗಂಗೀರೆಡ್ಡಿ,
ವಿಜಯಕುಮಾರ ಗಂಜಿ ಇದ್ದರು.

































