ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.05:– ಉತ್ತಮ ಆಹಾರ ಸೇವನೆಯಿಂದ ರೋಗ ಮುಕ್ತ ಜೀವನ ಸಾಧ್ಯ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಆಹಾರ ತುಂಬಾ ಮುಖ್ಯ ಮನುಷ್ಯನ ಆರೋಗ್ಯವನ್ನು ನಿರ್ಧರಿಸುವುದೇ ಆಹಾರ ಎಂದು ಸಂಪನ್ಮೂಲ ವ್ಯಕ್ತಿ ಡಾ.ಖಾದರ್ ವಾಲಿ ಹೇಳಿದರು.
ಪಟ್ಟಣದ ಶಿವಾನುಭವ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜ್ಞಾನ ವಿಕಾಸ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು.ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯ ಉತ್ತಮ ಸಂಪತ್ತು ಇದ್ದ ಹಾಗೆ, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಅವಶ್ಯಕತೆ ಇದೆ ಎಂದರಲ್ಲದೆ ಅಪೌಷ್ಟಿಕತೆ ನಿವಾರಣೆಗೆ ಎಂತಹ ಆಹಾರ ಸೇವಿಸಬೇಕು. ಅತಿಪೌಷ್ಟಿಕತೆ ಮತ್ತು ಅಪೌಷ್ಟಿಕತೆಯ ನಿವಾರಣೆ ಹೇಗೆ ಎಂಬುದರ ಕುರಿತು ಸಂಕ್ಷೇಪವಾಗಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತ ರಾವ್ ಮಾತನಾಡಿ ನಾಡಿನ ಎಲ್ಲೆಡೆ ಮಹಿಳೆಯರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹತ್ತು ಹಲವು ತರಬೇತಿಗಳನ್ನು ನೀಡುವುದರ ಮೂಲಕ ಮಹಿಳೆಯರ ಸಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಹೊಲಿಗೆ, ಬ್ಯೂಟಿಷಿಯನ್, ಹೈನುಗಾರಿಕೆ ಸೇರಿದಂತೆ ಅನೇಕ ವಿವಿದ ತರಬೇತಿಯನ್ನು ಶಿಬಿರದ ಮೂಲಕ ನಡೆಸುತ್ತಾ ಬಂದಿದದ್ದು ಇದರ ಸದುಪಯೋಗ ಪಡೆದು ಕೊಂಡು ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ತಿಳಿಸಿದರು.
ಬಳಿಕ ಮಹಿಳೆಯರಿಂದ ಗೋಷ್ಠಿಗೆ ಸಂಬಂದಿಸಿದಂತೆ ಹಲವು ಚರ್ಚೆಗಳನ್ನು ನಡೆದವು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಯ ತಾಲ್ಲೂಕು ಯೋಜನಾಧಿಕಾರಿ ಕೆ ಪಾತಲಿಂಗಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸಂಪತ್ ಕುಮಾರ್., ನಾಗರತ್ನಮ್ಮ, ವಕೀಲೆ ಪೂರ್ಣಿಮಾ. ಗ್ರಾಮ ಪಂಚಾಯತ್ ಸದಸ್ಯ ಶೇಖರ್, ಚಂದ್ರಶೇಖರ್ ಗುರುರಾಜ್, ಜ್ಞಾನ ವಿಕಾಸ ಯೋಜನೆಯ ಸಮನ್ವಯಧಿಕಾರಿ ಅನುಷಾ, ಕೃಷಿ ಅಧಿಕಾರಿ ಮಹದೇವಸ್ಚಾಮಿ, ಸೇರಿದಂತೆ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ ಕಾರ್ಯಕ್ರಮದ ಕೇಂದ್ರ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.


























