
ಉಡುಪಿ-ಶ್ರೀ ಕೃಷ್ಣ ಮಠದ ಕನಕನ ಕಿಂಡಿಗೆ ಸ್ವರ್ಣ ಕವಚ ಅಳವಡಿಕೆ ಮಾಡಲಾಗುತ್ತಿದೆ. ಈ ಚಿನ್ನದ ಕವಚದ ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಒಂದು ಭಾಗ್ಯ ಅಂತಾನೆ ಹೇಳಬಹುದು.
ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಒಂದು ಭಾಗ್ಯ ಅಂತಾನೆ ಹೇಳಬಹುದು, ಅದರಲ್ಲೂ ಚಿನ್ನದ ಹೊದಿಕೆಯಿರುವ ಕನಕ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡೋದು ಸೌಭಾಗ್ಯವೇ ಸರಿ. ಮಾಜಿ ಸಚಿವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಸೇವಾ ರೂಪದಲ್ಲಿ ಬಂಗಾರದ ಕವಚವನ್ನು ದೇವಳಕ್ಕೆ ನೀಡುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನ.೨೮ರಂದು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಆಗಮಿಸಿ ಶ್ರೀಕೃಷ್ಣನಿಗೆ ಸಮರ್ಪಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ಸ್ವರ್ಣ ಕವಚವನ್ನು ನಿರ್ಮಾಣ ಮಾಡಲಾಗಿದ್ದು, ನೂತನವಾಗಿ ನಿರ್ಮಾಣ ಮಾಡಿದಂತ ಸ್ವರ್ಣ ಕವಚವನ್ನು ಪ್ರಮೋದ್ ಮಧ್ವರಾಜ್ ಅವರು ತಮ್ಮ ಮನೆಗೆ ಮೊದಲು ಬರಮಾಡಿಕೊಂಡು, ತಮ್ಮ ಮನೆಯಲ್ಲಿರುವ ಗೋ ಶಾಲೆಯಲ್ಲಿ ಸ್ವರ್ಣ ಕವಚಕ್ಕೆ ವಿಶೇಷ ಪೂಜೆ ನೆರವೇರಿಸಿ ಆ ಬಳಿಕ ಶ್ರೀ ಕೃಷ್ಣನಿಗೆ ಸಮರ್ಪಿಸಿದರು.
ಕನಕನ ಕಿಂಡಿಗೆ ಬಂಗಾರದ ಕವಚವನ್ನು ಅಳವಡಿಕೆ ಮಾಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ನ.೨೮ರಂದು ಅದನ್ನು ಉದ್ಘಾಟನೆ ಮಾಡಲಿದ್ದಾರೆ. ಇನ್ನು ಮುಂದೆ ಭಕ್ತರಿಗೆ ಶ್ರೀ ಕೃಷ್ಣನನ್ನು ಬಂಗಾರದ ಕವಚದ ಮೂಲಕ ದರ್ಶನ ಮಾಡುವ ಅವಕಾಶವಿದೆ. ಇದು ನನ್ನ ತಂದೆಯವರ ಆಸೆಯೂ ಆಗಿತ್ತು ಎಂದು ಸಂತಸದ ನುಡಿಗಳನ್ನಾಡಿದ್ದಾರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್. ಒಟ್ಟಾರೆ ಅನೇಕ ಕಡೆಗಳಿಂದ ಬರುವ ಭಕ್ತರಿಗೆ ಚಿನ್ನದ ಹೊದಿಕೆಯಿರುವ ಕನಕನ ಕಿಂಡಿಯಿಂದ ಶ್ರೀ ಕೃಷ್ಣನನ್ನು ನೋಡುವ ಭಾಗ್ಯ ಸಿಕ್ಕಿರುವುದು ಪುಣ್ಯವೇ ಸರಿ.
ಉಡುಪಿ : ’ಸ್ವರ್ಣ ಕವಚ, ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ’ – ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

ಉಡುಪಿ-ಪ್ರಧಾನಿ ಮೋದಿ ಅವರು ನ.೨೮ರಂದು ಸ್ವರ್ಣ ಕವಚ, ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಈ ಬಗ್ಗೆ ಶ್ರೀ ಕೃಷ್ಣ ಮಠದ ಗೀತಾ ಮಂದಿರದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ವಿವರಣೆಯನ್ನು ನೀಡಿ ೧೨ ಗಂಟೆಗೆ ಪ್ರಧಾನಿ ಮೋದಿ ಅವರು ಆಗಮಿಸಿ ಕನಕದಾಸರಿಗೆ ಪುಷ್ಫಾರ್ಚನೆಯನ್ನು ಮಾಡಿ ಬಂಗಾರದಿಂದ ಮಾಡಿದಂತಹ ಕನಕ ಕವಚವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಪ್ರಧಾನಿ ಅವರಿಗೆ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನವನ್ನು ಮಾಡಲಿದ್ದಾರೆ. ಪೂರ್ಣಕುಂಭ ಮುಖಾಂತರ ಮಹಾ ದ್ವಾರದ ಮೂಲಕ ಸ್ವಾಗತಿಸಿ, ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಆದ ಬಳಿಕ ಗರ್ಭಗುಡಿಯಲ್ಲಿ ಶ್ರೀ ಕೃಷ್ಣನ ದರ್ಶನ, ಪ್ರಾಣ ದೇವರ ದರ್ಶನವನ್ನು ನಡೆಸಿ ಗೋಶಾಲೆ ಹಾಗೂ ಗೀತಾ ಮಂದಿರವನ್ನು ಪ್ರವೇಶಿಸುತ್ತಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.




























