ಉಡುಪಿ ಪಲಿಮಾರುಮಠದ ಸ್ವಾಮಿಜಿಯವರು ಧರ್ಮಸ್ಥಳ ಭೇಟಿ

ಉಜಿರೆ: ಉಡುಪಿ ಪಲಿಮಾರುಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಮತ್ತು ವಿದ್ಯಾರಾಜೇಶ ಸ್ವಾಮೀಜಿ ಮಂಗಳವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ದೇವರದರ್ಶನ ಬಳಿಕ ಸ್ವಾಮೀಜಿಯವರನ್ನು ಬೀಡಿಗೆ (ಹೆಗ್ಗಡೆಯವರ ನಿವಾಸ) ಸ್ವಾಗತಿಸಲಾಯಿತು.
ಸ್ವಾಮೀಜಿಯವರ ಪಾದಪೂಜೆಯ ಬಳಿಕ ಡಿ. ವೀರೇಂದ್ರ ಹೆಗ್ಗಡೆಯವರು ಫಲಕಾಣಿಕೆ ನೀಡಿ ಶಾಲು ಹೊದಿಸಿ ಗೌರವಿಸಿದರು. ಸ್ವಾಮೀಜಿಯವರು ಹೆಗ್ಗಡೆಯವರಿಗೆ ಪ್ರಸಾದ ನೀಡಿ ಶುಭ ಹಾರೈಸಿದರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.