ಉಡುಪಿಯಲ್ಲಿ ಸೀರತ್ ಅಭಿಯಾನಕ್ಕೆ ಚಾಲನೆ

ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವ ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಸೀರತ್ ಅಭಿಯಾನದ ಚಾಲನೆಯನ್ನು ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಸಾಂತ್ವನ -ಹಣ್ಣು ಹಂಪಲು ವಿತರಣೆ, ವ್ಹೀಲ್ ಚಯರ್ ಮತ್ತು ಇನ್ನಿತರ ಪರಿಕರಗಳನ್ನು ಹಸ್ತಾಂತರಿಸುವ ಮೂಲಕ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ವೈದಾಧಿಕಾರಿಗಳಾದ ಡಾ. ಅಶೋಕ್ ಹೆಚ್., ಶ್ರೀ ನಿತ್ಯಾನಂದ ಒಳಕಾಡು, ಹಾಗೂ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಫೈಝ್ ಆದಿಉಡುಪಿ, ಉಪಾಧ್ಯಕ್ಷರಾದ ಖಾಲಿದ್ ಅಬ್ದುಲ್ ಅಝೀಝ್, ಸದಸ್ಯರುಗಳಾದ ಶೇಖ್ ವಾಹಿದ್ ದಾವೂದ್, ಶ್ರೀ ಚಾರ್ಲ್ಸ್ ಆಂಬ್ಲರ್, ಇಕ್ಬಾಲ್ ಮನ್ನಾ, ಶ್ರೀ ಸುಂದರ್ ಮಾಸ್ಟರ್, ಆಸಿಫ್ ಜಿ.ಡಿ, ಶ್ರೀ ಶ್ಯಾಮರಾಜ್ ಬಿರ್ತಿ, ಮುಶೀರ್ ಶೇಖ್, ದಾನಿಶ್ ಮೌಲಾನಾ, ಮನ್ಸೂರ್ ಸಂತೆಕಟ್ಟೆ, ನವೀದ್, ರಿಯಾಝ್ ಕುಕ್ಕಿಕಟ್ಟೆ, ಪೀರು ಸಾಹೇಬ್, ವಾಜಿದಾ ತಬಸ್ಸುಮ್, ಫರ್ಹಶತ್ ದಾವೂದ್ ಇನ್ನಿತರರು ಉಪಸ್ಥಿತರಿದ್ದರು.