ಉಗ್ರರ ದಮನ ಸೈನಿಕರ ಆಪರೇಷನ್ ಸಿಂಧೂರಕ್ಕೆ  ಜಗತ್ತು ಕೊಂಡಾಡಿದೆ

Oplus_131072


ಹಗರಿಬೊಮ್ಮನಹಳ್ಳಿ. ಮೇ.23  ಆಪರೇಷನ್ ಸಿಂಧೂರ ಮೂಲಕ ಉಗ್ರರನ್ನು ಬಗ್ಗು ಬಡೆದ ಸೈನಿಕರಿಗೆ   ಪ್ರತಿಯೊಬ್ಬ ನಾಗರಿಕರು ಗೌರವಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ಕರವೇ ಅಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.
ಪಟ್ಟಣದ ಶ್ರೀ ಈಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಗುರುವಾರ ಬೋಲೋ ಭಾರತ್ ಮಾತಾ ಕೀ ಜೈ, ಏನೇ ಬರಲಿ ಒಗ್ಗಟ್ಟಿರಲಿ,  ಜಯ ಘೋಷದೊಂದಿಗೆ ರಾಷ್ಟ್ರಧ್ವಜ ಹಿಡಿದು ತಿರಂಗಾ ಯಾತ್ರೆ ಮಾಡುವ ಮೂಲಕ ದೇಶದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.
ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ತಿರಂಗ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿ ದೇಶದ ಸೈನಿಕರು ದೇಶದ ರಕ್ಷಣೆಗಾಗಿ ಜನರ ರಕ್ಷಣೆಗಾಗಿ ತಮ್ಮ ಮನೆ ತೊರೆದು ದೇಶ ಸೇವೆಗಾಗಿ ಬಿಸಿಲು ನೆರಳು ನೋಡದೆ ರಾತ್ರಿ ಹಗಲಿರುಳು ಎನ್ನದೆ ಶ್ರಮಿಸುತ್ತಾರೆ.
ದೇಶದ ನಾಗರಿಕರನ್ನು ಕೊಂದ ಉಗ್ರರ ನೆಲೆಗಳನ್ನು ದ್ವಂಸ ಗೊಳಿಸುವ ಕೆಲಸ ಮಾಡಿದ್ದು ಹೆಮ್ಮೆಯ ವಿಷಯ  ದೇಶ ಮೊದಲು ದೇಶ ಚನ್ನಾಗಿದ್ರೆ ಅಧಿಕಾರ ಪದವಿ ಇನ್ನಿತರ ಎಲ್ಲಾ ಸಿಗುತ್ತದೆ.ದೇಶ ರಕ್ಷಣೆ ಮಾಡುವ ಸೈನಿಕರನ್ನು ಗೌರವಿಸೋಣ ಎಂದರು.
ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಬಲ್ಲಾಹುಣಸಿ ರಾಮಣ್ಣ ಮಾತನಾಡಿ ಅಮಾಯಕ ನಾಗರಿಕರ ಹತ್ಯೆ ಮಾಡಿ 26 ಜನರ ಮಹಿಳೆಯರ ಕುಂಕುಮ ಹಳಸಿದ್ದ ಉಗ್ರ ನೆಲೆಗಳ ಗುರಿಯಾಗಿಸಿ ಅಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಮಾಡುವ ಮೂಲಕ ನೂರಾರು ಉಗ್ರರನ್ನು ಹತ್ಯೆ ಮಾಡಿ ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ನಮ್ಮ ದೇಶದ ಸೈನಿಕರ ಸಾಹಸ ಮೆಚ್ಚುವಂತಹದ್ದು ಎಂದರು
ನಿವೃತ್ತ ಸೈನಿಕರಾದ ರಾಮರೆಡ್ಡಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ದ್ವಂಸ ಗೋಲಿಸಿರುವುದು ಸೈನಿಕ ಕ್ಯಾಂಪ್ ಗಳನ್ನು ನಾಶ ಗೊಳಿಸಿರುವುದು ನಮ್ಮ ದೇಶದ ಸೈನಿಕರ ಶಕ್ತಿಯನ್ನು ಜಗತ್ತು ನೋಡಿದೆ ಸೈನಿಕರ ಬಗ್ಗೆ ಜಗತ್ತಿನ ಹಲವು ದೇಶಗಳು ಕೊಂಡಾಡಿವೆ. ದೇಶ ರಕ್ಷಣೆ ಮಾಡುವ ಸೈನಿಕರನ್ನು ಅವಮಾನಿಸುವಂತಹ ಕೆಲಸವನ್ನು ಯಾರು ಕೂಡ ಮಾಡಬಾರದು. ಎಲ್ಲಾರೂ ಒಗ್ಗೂಡಿ ಸೈನಿಕರಿಗೆ ದೈರ್ಯ ತುಂಬುವ ಕೆಲಸ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶಿವಾನಂದ್ ಬೇವೂರ್ ಮಲ್ಲಿಕಾರ್ಜುನ,
ಪುರಸಭೆ ಸದಸ್ಯರಾದ ನವೀನ್ ಕುಮಾರ್,ಜೋಗಿ ಹನುಮಂತಪ್ಪ ಜೆಡಿಎಸ್ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ವೈದ್ಯರಾದ ಡಾ.ವಿಶ್ವನಾಥ ಗವಿಯಪ್ಪ, ಸಂಚಿ ಶಿವಣ್ಣ, ನಟರಾಜ ಬಾದಾಮಿ ಬಡಿಗೇರ್ ಬಸವರಾಜ್, ನೆರೆಗಲ್ ಮಲ್ಲಿಕಾರ್ಜುನ,  ಮಹೇಂದ್ರ, ಕೊಟ್ರೇಶ್, ರೆಡ್ಡಿ ಸಮಾಜದ ಅಧ್ಯಕ್ಷ ಬಸವರಾಜ ರೆಡ್ಡಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೋಟೆಲ್ ಸಿದ್ದರಾಜು, ಹಿಂದೂ ಸಂಘಟನೆಯ ನಾಗರಾಜ, ಚಂದ್ರಶೇಖರ್, ವಿವಿಧ ಪಕ್ಷಗಳ ಮುಖಂಡರು ವಿವಿಧ ವರ್ತಕರ ಸಂಘದವರು ಹಿಂದೂಪರ, ಬಜರಂಗದಳ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.