ಈ ಕೋನಾ ಕಾರ್ಪಸ್ ಗಿಡಗಳಿಗೆ ಮುಕ್ತಿ ಬೇಡವೇ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಡಿ,3- ನಗರದ ಬಳ್ಳಾರಿ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎನ್ನಲಾಗುವ ಈ ಕೋನಾ ಕಾರ್ಪಸ್ ಗಿಡಗಳು ಬೃಹದಾಕಾರವಾಗಿ ಬೆಳೆದಿವೆ.

ಈ ಗಿಡ ಇತರೇ ಗಿಡಗಳಂತೆ ಶುದ್ದ ಆಮ್ಲಜನಕವನ್ನಲ್ಲ. ಅದು ಹೊರಸೂಸುವ  ಅನಿಲ ಕ್ಯಾನ್ಸರ್ ಕಾರಕವಾಗಿದೆಂದು ಹೇಳಲಾಗುತ್ತಿದೆ. ಹೀಗಾಗಿ ಈ ಗಿಡಗಳಲ್ಲಿ ಯಾವೊಂದು ಪಕ್ಷಿಯೂ ಕೂಡುವುದಿಲ್ಲ. ಪ್ರಾಣಿಗಳು ಇದರ ಎಲೆ ತಿನ್ನಲ್ಲ.

ಕಡಿಮೆ ನೀರಿನಲ್ಲಿ ದೊಡ್ಡದಾಗಿ ಬೆಳೆಯುತ್ತದೆ. ಸದಾ ಹಸಿರಿನಿಂದ ಕೂಡಿರುತ್ತದೆಂದು ಬೆಲಕೆಸಲಾಗುತ್ತದೆ. ಈ ವಿದೇಶಿ ತಳಿಯ ಗಿಡ ಮಾನವನ ಆರೋಗ್ಯಕ್ಕೆ ಹಾನಿಕರವಾದರೆ ಆಸ್ಪತ್ರೆ ಆವರಣದಲ್ಲಿ ಇರುವುದು ಸರಿಯೇ ಎಂಬ ಪ್ರಶ್ನೆ ಉದ್ಭವ ಆಗುತ್ತದೆ.

ಈ ಬಗ್ಗೆ ಬಿಎಂಸಿಆರ್ಸಿಸಿಯ ನಿರ್ದೇಶಕ ಡಾ.ಗಂಗಾಧರಗೌಡ ಅವರು ಈ ಬಗ್ಗೆ ಪರಿಶೀಲನೆ ಮಾಡಿ. ಇವನ್ನು ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ..