Home ಜಿಲ್ಲೆ ಮಂಗಳೂರು ಈದ್ ಮೀಲಾದ್ ಪ್ರಯುಕ್ತ ಸುಳ್ಯದಲ್ಲಿ ಪೊಲೀಸ್ ಪಥ ಸಂಚಲನ

ಈದ್ ಮೀಲಾದ್ ಪ್ರಯುಕ್ತ ಸುಳ್ಯದಲ್ಲಿ ಪೊಲೀಸ್ ಪಥ ಸಂಚಲನ

ಸುಳ್ಯ:ಈದ್-ಮಿಲಾದ್ ಹಬ್ಬದ ಪ್ರಯುಕ್ತ ಸುಳ್ಯ ನಗರದ ಮುಖ್ಯ ಬೀದಿಯಲ್ಲಿ ಸುಳ್ಯ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.
ಹಬ್ಬದ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸುಳ್ಯದ ಜ್ಯೋತಿ ವೃತ್ತದಿಂದ ಗಾಂಧಿನಗರದ ವರೆಗೆ ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳು ಹಾಗೂ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಪಥಸಂಚಲನದಲ್ಲಿ ಭಾಗವಹಿಸಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಸೂಚನೆ ನೀಡಿದರು.