
ವಾಷಿಂಗ್ಟನ್,ಡಿ.17-ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಖಂಡಿಸಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇದು ಯಾದೃಚ್ಛಿಕ ಕೃತ್ಯವಲ್ಲ, ಬದಲಾಗಿ ದೀರ್ಘಕಾಲದ ನೀತಿಗಳ ಪರಿಣಾಮವಾಗಿದೆ ಎಂದು ಕರೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಇಸ್ಲಾಮಿಸ್ಟ್‍ಗಳು ಮತ್ತು ಇಸ್ಲಾಮಿಸಂ ಅಮೆರಿಕದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸ್ವಾತಂತ್ರ್ಯ, ಭದ್ರತೆ ಮತ್ತು ಸಮೃದ್ಧಿಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತವೆ ಎಂದು ಗಬ್ಬಾರ್ಡ್ ಹೇಳಿದ್ದಾರೆ. ಇದು ಆಸ್ಟ್ರೇಲಿಯಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮೂಲಭೂತವಾದಿಗಳು ಒಳಹರಿವಿನ ನೇರ ಪರಿಣಾಮವಾಗಿದೆ. ಅವರ ಗುರಿ ಆಸ್ಟ್ರೇಲಿಯಾವನ್ನು ಇಸ್ಲಾಮೀಕರಣಗೊಳಿಸುವುದು ಮಾತ್ರವಲ್ಲ, ಯುಎಸ್ ಸೇರಿದಂತೆ ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸುವುದು. ಇಸ್ಲಾಮಿಸಂ ಯುಕೆ ಮತ್ತು ಇಡೀ ಪ್ರಪಂಚದ ಸ್ವಾತಂತ್ರ್ಯ, ಭದ್ರತೆ ಮತ್ತು ಸಮೃದ್ಧಿಗೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತದೆ ಎಂದು ಅವರು ಹೇಳಿದ್ದಾರೆ.ಈ ದಾಳಿಯು ಯಾರಿಗೂ ಆಶ್ಚರ್ಯವನ್ನುಂಟು ಮಾಡಬಾರದು, ಏಕೆಂದರೆ ಇದು ಆಸ್ಟ್ರೇಲಿಯಾಕ್ಕೆ ಇಸ್ಲಾಮಿಸ್ಟ್‍ಗಳು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿರುವುದರ ನೇರ ಪರಿಣಾಮವಾಗಿದೆ ಎಂದು ಗಬ್ಬಾರ್ಡ್ ಹೇಳಿದ್ದಾರೆ.ಇಸ್ಲಾಮಿಸ್ಟ್‍ಗಳು ಆಸ್ಟ್ರೇಲಿಯಾವನ್ನು ಇಸ್ಲಾಮೀಕರಣಗೊಳಿಸುವುದಷ್ಟೇ ಅಲ್ಲ, ಅಮೆರಿಕ ಸೇರಿದಂತೆ ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ತುಳಸಿ ಗಬ್ಬಾರ್ಡ್ ಪೆÇೀಸ್ಟ್‍ನಲ್ಲಿ ಹೇಳಿದ್ದಾರೆ.
ಡಿಸೆಂಬರ್ 14 ರಂದು ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್ ಮೇಲೆ ಇಬ್ಬರು ಭಯೋತ್ಪಾದಕರು ಹಠಾತ್ತನೆ ದಾಳಿ ಮಾಡಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಸುಮಾರು 1,000 ಜನರು ಸೇರಿದ್ದ ಯಹೂದಿ ಸಮುದಾಯದ ಹನುಕ್ಕಾ ಹಬ್ಬದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಕನಿಷ್ಠ 15 ಜನರು ಸಾವನ್ನಪ್ಪಿದ್ದು ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಪೆÇಲೀಸ್ ಎನ್‍ಕೌಂಟರ್‍ನಲ್ಲಿ ಒಬ್ಬ ಶಂಕಿತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೊಬ್ಬ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದಾರೆ. ಆಸ್ಟ್ರೇಲಿಯಾದ ಪೆÇಲೀಸರು ಗುಂಡಿನ ದಾಳಿಯನ್ನು ಭಯೋತ್ಪಾದಕ ದಾಳಿಯೆಂದು ತನಿಖೆ ನಡೆಸಿದ್ದಾರೆ.
ಬೋಂಡಿ ಬೀಚ್ ಭಯೋತ್ಪಾದಕ ದಾಳಿಯ ಅಪರಾಧಿ ಸಾಜಿದ್ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಬಂದು ನಂತರ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ನವೀದ್ ಅಲ್ಲಿಯೇ ಜನಿಸಿದರು. ಇಬ್ಬರೂ ಕಟ್ಟಾ ಇಸ್ಲಾಮಿಸ್ಟ್‍ಗಳು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕಗಳು ತನಿಖೆಯಿಂದ ಬಹಿರಂಗಗೊಂಡಿವೆ.
























