ಇಸ್ರೇಲ್ ವೈಮಾನಿಕ ದಾಳಿ: 13ಮಂದಿ ಸಾವು

ಟೆಲ್ ಅವೀವಾ,ನ.19- ಲೆಬನಾನ್‍ನಲ್ಲಿರುವ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದು ಹಲವು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ


ಕರಾವಳಿ ನಗರದ ಸಿಡಾನ್‍ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಡ್ರೋನ್ ದಾಳಿಯಿಂದ ಈ ಸಾವು ನೋವು ಸಂಭವಿಸಿದೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ದಕ್ಷಿಣ ಲೆಬನಾನ್‍ನಲ್ಲಿರುವ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ಮತ್ತೊಂದು ಇಸ್ರೇಲಿ ವೈಮಾನಿಕ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.ಈ ದಾಳಿ ಈ ಭಾಗದ ಜನರಲ್ಲಿ ಮತ್ತೆ ಭಯದ ವಾತಾವರಣ ಸೃಷ್ಠಿಯಾಗಿದೆ.
ಒಂದು ವರ್ಷದ ಹಿಂದೆ ಇಸ್ರೇಲ್-ಹೆಜ್ಬೊಲ್ಲಾ ಯುದ್ಧದಲ್ಲಿ ಕದನ ವಿರಾಮದ ನಂತರ ಲೆಬನಾನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.


ದಾಳಿಯಲ್ಲಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಆಂಬುಲೆನ್ಸ್‍ಗಳು ಗಾಯಾಳುಗಳು ಮತ್ತು ಸತ್ತವರನ್ನು ಸ್ಥಳಾಂತರಿಸಲು ಧಾವಿಸಿದಾಗ, ಆಂಬುಲೆನ್ಸ್‍ಗಳು ಘಟನಾ ಸ್ಥಳಕ್ಕೆ ಪತ್ರಕರ್ತರು ತಲುಪುವುದನ್ನು ಹಮಾಸ್ ಹೋರಾಟಗಾರರು ತಡೆದಿದ್ದಾರೆ ಎಂದು ಹೇಳಲಾಗಿದೆ.
ಇಸ್ರೇಲ್ ಸೇನೆಯ ವಿರುದ್ಧ ದಾಳಿಯನ್ನು ಸಿದ್ಧಪಡಿಸಲು ಬಳಸಲಾಗುತ್ತಿದ್ದ ಹಮಾಸ್ ತರಬೇತಿ ಆವರಣವನ್ನು ಹೊಡೆದುರುಳಿಸಿದ್ದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಗುಂಪು ಕಾರ್ಯನಿರ್ವಹಿಸುವಲ್ಲೆಲ್ಲಾ ಇಸ್ರೇಲಿ ಸೈನ್ಯ ಹಮಾಸ್ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಅದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ, ಲೆಬನಾನ್ ಮೇಲಿನ ಇಸ್ರೇಲ್ ವೈಮಾನಿಕ ದಾಳಿಗಳು ಉಗ್ರಗಾಮಿ ಹೆಜ್ಬೊಲ್ಲಾ ಗುಂಪಿನ ಹಲವಾರು ಅಧಿಕಾರಿಗಳನ್ನು ಮತ್ತು ಹಮಾಸ್‍ನಂತಹ ಪ್ಯಾಲೆಸ್ಟೀನಿಯನ್ ಬಣಗಳ ಪ್ರಮುಖರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.


ಹಮಾಸ್‍ನ ಉಪ ರಾಜಕೀಯ ಮುಖ್ಯಸ್ಥ ಮತ್ತು ಗುಂಪಿನ ಮಿಲಿಟರಿ ವಿಭಾಗದ ಸ್ಥಾಪಕ ಸಲೇಹ್ ಅರೌರಿ ನನ್ನು ಜನವರಿ 2, ರಂದು ಬೈರುತ್‍ನ ದಕ್ಷಿಣ ಉಪನಗರದಲ್ಲಿ ಡ್ರೋನ್ ದಾಳಿಯಲ್ಲಿ ಕೊಲ್ಲಲಾಗಿದೆ. ಅಂದಿನಿಂದ ಹಲವಾರು ಇತರ ಹಮಾಸ್ ಅಧಿಕಾರಿಗಳು ದಾಳಿಯಲ್ಲಿ ಹತರಾಗಿದ್ದಾರೆ ಎಂದು ಹೇಳಲಾಗಿದೆ.