
ಟೆಹ್ರಾನ್,ಜೂ.16-ಇರಾನ್-ಇಸ್ರೇಲ್ ಸಂಘರ್ಷ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ, ಪಾಕಿಸ್ತಾನ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಇರಾನಿನ ಜನರಲ್ ಮೊಹ್ಸಿನ್ ರೆಜೈ ಇಸ್ರೇಲ್‍ಗೆ ಬೆದರಿಕೆ ಹಾಕಿದ್ದಾರೆ.
ಇರಾನ್ ಇಸ್ರೇಲ್‍ಗೆ ಪರಮಾಣು ಬಾಂಬ್ ಬೆದರಿಕೆ ಹಾಕಿದೆ.ಇಸ್ರೇಲ್ ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ, ಪಾಕಿಸ್ತಾನವೂ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸುವ ಮೂಲಕ ಪ್ರತಿಕಾರ ತೆಗೆದುಕೊಳ್ಳುವ ವಾಗ್ದಾನ ಮಾಡಿದೆ ಇರಾನಿನ ಜನರಲ್ ಮೊಹ್ಸಿನ್ ರೆಜೈ ತಿಳಿಸಿದ್ದಾರೆ.
ಇರಾನ್‍ನಲ್ಲಿ ಹಲವು ಗುಪ್ತ ಸಾಮಥ್ರ್ಯಗಳಿವೆ ಎಂದು ರೆಜೈ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಪಾಕಿಸ್ತಾನ ಇನ್ನೂ ಪ್ರತಿಕ್ರಿಯಿಸಿಲ್ಲ.
ಈ ಮೂಲಕ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ ನ ಹಿರಿಯ ಜನರಲ್ ಮತ್ತು ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮೊಹ್ಸೆನ್ ರೆಜೈ ಇಸ್ರೇಲ್‍ಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಟಿವಿ ಕಾರ್ಯಕ್ರವೊಂದರಲ್ಲಿ , ಈ ಉದ್ವಿಗ್ನತೆಯ ನಡುವೆ ಇಸ್ರೇಲ್ ಇರಾನ್ ಮೇಲೆ ಪರಮಾಣು ದಾಳಿ ನಡೆಸಲು ಯೋಚಿಸಿದರೆ, ಪಾಕಿಸ್ತಾನವು ಅದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಅವರು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ.
ರೆಜೈ ಏನು ಹೇಳಿದರು?
ಇಸ್ರೇಲ್ ಏನನ್ನೂ ಮಾಡಲು ಸಾಧ್ಯವಿಲ್ಲ. ಇಸ್ರೇಲ್ ಎಂದಾದರೂ ಇರಾನ್ ಮೇಲೆ ಪರಮಾಣು ದಾಳಿ ನಡೆಸಿದರೆ, ಪಾಕಿಸ್ತಾನವು ಇಸ್ರೇಲ್ ಮೇಲೆಯೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ನಮಗೆ ತಿಳಿಸಿದೆ ಎಂದು ಮೊಹ್ಸೆನ್ ರೆಜೈ ಹೇಳಿರುವುದಾಗಿ ವರದಿಯಾಗಿದೆ.