ಇಸ್ರೇಲ್, ಇರಾನ್ ಸಂಘರ್ಷ ಅಪಾರ ಸಾವು -ನೋವು

ಟೆಲ್ ಅವಿವ್/ಟೆಹ್ರಾನ್, ಜೂ.16- ಆಪರೇಷನ್ ರೈಸಿಂಗ್ ಲಯನ್ ಬಳಿಕ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು ಇರಾನ್‍ನ 170ಕ್ಕೂ ಹೆಚ್ಚು ಸ್ಥಳಗಳ 720 ಸೇನಾ ಶಿಬಿರಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.

ಇಸ್ರೇಲ್ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದಾರೆ, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 14 ಇಸ್ರೇಲ್ ನಾಗರಿಕರು ಸೇರಿ 390 ಮಂದಿ ಸಾವನ್ನಪ್ಪಿದ್ದಾರೆ ಉನ್ನತ ಮೂಲಗಳು ಖಚಿತ ಪಡಿಸಿವೆ.