- ಕೃಷ್ಣತುಳಸಿ (ಕಪ್ಪುತುಳಸಿ) 1 ಹಿಡಿಯಷ್ಟು ತೆಗೆದುಕೊಂಡು ಚೆನ್ನಾಗಿ ತೊಳೆದು ರಸತೆಗೆದು ರಸವನ್ನು ಎರಡು ಕಣ್ಣಿಗೆ 2 -2 ಹನಿ ಹಾಕುತ್ತಾ ಬಂದರೆ ಇರುಳುಗಣ್ಣು ಮಂದದೃಷ್ಟಿ ಇರುವುದು ಎರಡೂ ನಿವಾರಣೆಯಾಗುತ್ತದೆ. ಹಾಗೂ
- ನಿಂಬೆಹಣ್ಣಿನ ರಸಕ್ಕೆ ಜೇನುತುಪ್ಪ ಹಾಗೂ ಚಿಟಿಕೆ ಪಚ್ಚಕರ್ಪೂರವನ್ನು ಕಲಸಿ ಕಣ್ಣಿಗೆ ಕಾಡಿಗೆಯಂತೆ ಇಡುತ್ತಾ ಬಂದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ, ಕಣ್ಣಿನಲ್ಲಿ ಕಾಂತಿ ಹೆಚ್ಚಾಗುತ್ತದೆ.
- ಏಲಕ್ಕಿಯಿಂದತೆಗೆದಎಣ್ಣೆಯನ್ನು ಕಣ್ಣುಗಳಿಗೆ 2 2 ಹನಿ ಹಾಕುತ್ತಾಬಂದರೆ ಇರುಳುಗಣ್ಣು ನಿವಾರಣೆಯಾಗುತ್ತದೆ.
- ಅಗಸೆ ಬೀಜದ ಹೂವನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಕೆಲವು ದಿನಗಳವರೆಗೆ ಸೇವಿಸುವುದರಿಂದ ಇರುಳುಗಣ್ಣು ಉತ್ತಮಗೊಳ್ಳುತ್ತದೆ.
- ಕುಂಬಳಗಿಡದ ಬೀಜವನ್ನು ಸುಟ್ಟು ಭಸ್ಮ ಮಾಡಿ ಬೆಣ್ಣೆಗೆ ಈ ಭಸ್ಮವನ್ನು ಸೇರಿಸಿ ಕಲಸಿ ಕಣ್ಣಿಗೆ ಕಾಡಿಗೆಯಂತೆ ಹಚ್ಚುವುದು.
- ಹಾಗಲಕಾಯಿಎಲೆ ರಸಕ್ಕೆ ಶುದ್ಧ ಜೇನುತುಪ್ಪ 2 ಹನಿ ಸೇರಿಸಿ ಕಣ್ಣಿಗೆ ಹಚ್ಚುತ್ತಾ ಬಂದರೆ ಕ್ರಮೇಣ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.
- ನುಗ್ಗೆ ಬೀಜದ ಚೂರ್ಣವನ್ನು ಹಸುವಿನ ತುಪ್ಪದಲ್ಲಿ ಬೆರೆಸಿಕಣ್ಣಿಗೆ ಸೌಮ್ಯವಾಗಿ ಹಚ್ಚಿಕೊಳ್ಳುವುದು.
- ಕುಂಬಳಕಾಯಿಯ ಬೀಜವನ್ನು ಸುಟ್ಟು ಭಸ್ಮ ಮಾಡಿ ಅದರ ನುಣುಪಾದ ಪುಡಿಯನ್ನು ಬೆಣ್ಣೆಯಲ್ಲಿ ಕಲಸಿ ಅಂಜನ ಹಾಕುವುದು.
- ಅಗಸೆ ಗಿಡದ ಹೂವಿನ ಕಷಾಯವನ್ನು ತಯಾರಿಸಿ ದಿನಗಳವರೆಗೆ ಕೆಲವು ಸೇವಿಸುವುದರಿಂದದೃಷ್ಟಿದೋಷ ನಿವಾರಣೆಯಾಗುವುದು.
- ಅಮೃತಬಳ್ಳಿಯ ರಸ ತೆಗೆದು ಅದಕ್ಕೆ ಸೈಂಧವ ಲವಣದ ಚೂರ್ಣ ಹಾಗೂ ಶುದ್ಧ ಜೇನುತುಪ್ಪ ಸೇರಿಸಿ ಅರೆದು ಕಣ್ಣುಗಳಿಗೆ ಹಾಕುವುದರಿಂದ ಯಾವುದೇ ವಿಧವಾದ ನೇತ್ರ ದೋಷವಿದ್ದರೂಗುಣವಾಗುತ್ತದೆ.
- ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
2.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ. 9535383921