ಇರಾನ್ ಹಿಂಸಾಚಾರಕ್ಕೆ 2000 ಮಂದಿ ಬಲಿ

ಟೆಹರಾನ್,ಜ.14:- ಇರಾನ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ. ಇದರಿಂದ ಇರಾನ್‍ನಲ್ಲಿ ರಕ್ತ ಸಿಕ್ತ ಅಧ್ಯಾಯಕ್ಕೆ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ.


ಇರಾನ್‍ನಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಭಟನೆ ನಿಲ್ಲಿಸಿ ಜೊತೆಗೆ ಭದ್ರತಾ ಪಡೆಗಳು ಹಿಂದೆ ಸರಿಯಬೇಕು ಇಲ್ಲದಿದ್ದರೆ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.


ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಕಳೆದ 17 ದಿನಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದರೂ ಸಹ, ಇದುವರೆಗೆ 1,850 ಪ್ರತಿಭಟನಾಕಾರರು, ಸರ್ಕಾರದೊಂದಿಗೆ ಸಂಬಂಧ ಹೊಂದಿರುವ 135 ಜನರು ಮತ್ತು ಒಂಬತ್ತು ಮಂದಿ ಭಾಗಿಯಾಗದ ನಾಗರಿಕರು ಮತ್ತು ಒಂಬತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ಇರಾನಿನ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿ 2,000 ಜನರು ಸಾವನ್ನಪ್ಪಿದ್ದಾರೆ, ಇದಕ್ಕೆ “ಭಯೋತ್ಪಾದಕರು” ಕಾರಣ ಎಂದು ಹೇಳಿದ್ದಾರೆ. ಇರಾನ್ ಕುರಿತ ಮಹತ್ವದ ಸಭೆಯಲ್ಲಿ ಟ್ರಂಪ್ ಭಾಗವಹಿಸಲಿದ್ದು, “ನಿಖರವಾದ ಸಾವಿನ ಸಂಖ್ಯೆಯ ಅಂಕಿಅಂಶಗಳನ್ನು” ಪಡೆಯಲು ಶ್ರಮಿಸಿದ್ದಾರೆ. ನಾಗರಿಕ ಹತ್ಯೆಯ ವಿಷಯವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು ಇರಾನಿನ ಅಧಿಕಾರಿಗಳು ಈ ಹತ್ಯೆಗಳಿಗೆ “ದೊಡ್ಡ ಬೆಲೆ ತೆರಬೇಕಾಗುತ್ತದೆ”. ಹೀಗಾಗಿ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹತ್ಯೆಯನ್ನು ಕೂಡಲೇ ನಿಲ್ಲಿಸಿ ಎಂದಿದ್ದಾರೆ.


“ಪ್ರತಿಭಟನಾಕಾರರ ಅರ್ಥಹೀನ ಹತ್ಯೆ ನಿಲ್ಲುವವರೆಗೂ ಇರಾನಿನ ಅಧಿಕಾರಿಗಳೊಂದಿಗಿನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದೇನೆ. ಸಹಾಯ ಅದರ ಹಾದಿಯಲ್ಲಿ ಅಮೆರಿಕಾ ಎಲ್ಲಾ ಪ್ರಯತ್ನ ಮಾಡುತ್ತಿದೆ. ಮಾತು ಕೇಳದಿದ್ದರೆ ದಾಳಿ ಮಾಡುವುದು ಶತಸಿದ್ದ ಎಂದು ಎಚ್ಚರಿಕೆ ನೀಡಿದ್ದಾರೆ.”
ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇಕಡ 25 ರಷ್ಟು ಸುಂಕವನ್ನು ಈಗಾಗಲೇ ಘೋಷಿಸಿರುವ ಡೊನಾಲ್ಡ್ ಟ್ರಂಪ್, ಈ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಮಿಲಿಟರಿ ಮತ್ತು ಇತರ ಆಯ್ಕೆಗಳನ್ನು ತೂಗುತ್ತಿದ್ದಾರೆ.


ಇರಾನ್ ಕರೆನ್ಸಿಯ ಕುಸಿತ ಮತ್ತು ಜೀವನ ವೆಚ್ಚದ ಏರಿಕೆಯ ವಿರುದ್ಧದ ಕೋಪದಿಂದ ಪ್ರತಿಭಟನೆಗಳು 31 ಪ್ರಾಂತ್ಯಗಳ 180 ನಗರಗಳು ಮತ್ತು ಪಟ್ಟಣಗಳಿಗೆ ಹರಡಿವೆ ಎಂದು ವರದಿಯಾಗಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಪಾದ್ರಿವರ್ಗಕ್ಕೆ ಅತ್ಯಂತ ಗಂಭೀರ ಸವಾಲುಗಳಲ್ಲಿ ಒಂದಾಗಿದ್ದು ಇರಾನ್ ಸರ್ಕಾರದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ.