ವಾಷಿಂಗ್ಟನ್, ಜೂ.14- ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುವ ವಿಷಯ ಮೊದಲೇ ತಿಳಿದಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ಧಾರೆ.
ಇರಾನ್ ಪರಮಾಣು ಮಾತುಕತೆಗೆ ಒಪ್ಪದ ಹಿನ್ನೆಲೆಯಲ್ಲಿ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲ್ ದಾಳಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಇಸ್ರೇಲ್ ತನ್ನ ದೇಶವನ್ನು ಪರಮಾಣು ದಾಳಿ ಸೇರಿದಂತೆ ಇನ್ನಿತರೆ ಅಪಾಯಗಳಿಂದ ರಕ್ಷಣೆ ಮಾಡಿಕೊಳ್ಳುವ ಈ ಕ್ರಮ ಶ್ಲಾಘನೀಯ.ಇರಾನಿನ ಪ್ರತೀಕಾರದ ಹೊರತಾಗಿಯೂ ಅಮೆರಿಕ-ಇಸ್ರೇಲ್ ಸಂಬಂಧ ಗಟ್ಟಿಯಾಗಿವೆ, ಇಸ್ರೇಲ್‍ಗೆ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.
ಇರಾನ್ ಮೇಲಿನ ಇಸ್ರೇಲ್ ದಾಳಿಗಳ ಬಗ್ಗೆ ತಮ್ಮ ಆಡಳಿತಕ್ಕೆ ಮುಂಚಿತವಾಗಿ ಮಾಹಿತಿ ಇತ್ತು. ಈ ದಾಳಿ “ಅತ್ಯುತ್ತಮ” ಮತ್ತು “ಅತ್ಯಂತ ಯಶಸ್ವಿಯಾಗಿದೆ” ಇರಾನ್ ಇನ್ನೂ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗೆ ನಡೆಸಲು ಕಾಲ ಮಿಂಚಿಲ್ಲ ಇದನ್ನು ಇರಾನ್ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಇರಾನಿನ ಪರಮಾಣು ಮತ್ತು ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್ ಸೇನೆ ನಡೆಸಿದ ವಾಯು ಕಾರ್ಯಾಚರಣೆ ನಡೆಸುವ ಕುರಿತು ತಮಗೆ ಮೊದಲೇ ತಿಳಿದಿತ್ತು. ಹೀಗಾಗಿ ಇರಾನ್ ಅವಮಾನ ಮತ್ತು ಸಾವನ್ನು ಉಳಿಸಲು ಪ್ರಯತ್ನ ನಡೆಸಿದೆ ಆದರೆ ಇರಾನ್ ಕೇಳಿಕೊಳ್ಳಲು ತಯಾರು ಇರಲಿಲ್ಲ ಎಂದಿದ್ಧಾರೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕಳೆದ ಹಲವು ತಿಂಗಳುಗಳಿಂದ ಇರಾನ್ ಜೊತೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರೂ ಅದು ಪ್ರಯತ್ನ ಆಗಿಲ್ಲ ಎಂದು ತಿಳಿಸಿದ್ದಾರೆ.
ಇಸ್ರೇಲ್ ಜೊತೆ ಅಮೇರಿಕಾ ಉತ್ತಮ ಸ್ನೇಹ ಸಂಬಂಧ ಮತ್ತು ಬಾಂಧವ್ಯ ಹೊಂದಿದ್ದು ಭವಿಷ್ಯದಲ್ಲಿಯೂ ಈ ಸಂಬಂಧ ಮುಂದುವರಿಯಲಿದೆ. ಇಸ್ರೇಲ್‍ಗೆ ಅಗತ್ಯವಿದ್ದರೆ ಅಗತ್ಯ ಸಹಕಾರ ಮತ್ತು ನೆರವು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಗಾಜಾ ಪಟ್ಟಿಯಲ್ಲಿ ಹಮಾಸು ಬಂಡುಕೋರರಿಗೆ ಇರಾನ್ ನಿರಂತರ ಬೆಂಬಲ ಸೇರಿದಂತೆ ಇಸ್ರೇಲ್ ಮೇಲೆ ದಾಳಿ ನಡೆಸಿದಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ನಡೆಸಿದ ದಾಳಿಯನ್ನು ಅಮೇರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ