
ನವದೆಹಲಿ,ಜ.17:- ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಇರಾನ್‍ನಿಂದ ಹಿಂತಿರುಗಿದ ಹಲವಾರು ಭಾರತೀಯ ಪ್ರಜೆಗಳು ತಡರಾತ್ರಿ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಇರಾನ್‍ನಲ್ಲಿರುವ ನಾಗರಿಕರು ದೇಶ ತೊರೆಯುವಂತೆ ಭಾರತ ಸರ್ಕಾರ ನೀಡಿದ ಸಲಹೆಯ ಮೇರೆಗೆ ಅವರು ಹಿಂದಿರುಗಿದ್ದು ಇರಾನ್‍ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತೀಯರ ಯೋಗಕ್ಷೇಮ ಕೇಂದ್ರ ಸರ್ಕಾರದ ಬದ್ದತೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇರಾನ್‍ನಿಂದ ಹಿಂದಿರುಗಿದ ಒಬ್ಬ ಭಾರತೀಯ ಪ್ರಜೆಯೊಬ್ಬರು ಪ್ರತಿಕ್ರಿಯಿಸಿ ಇರಾನ್‍ನಲ್ಲಿ ನಡೆಯುತ್ತಿರುವ ಹೋರಾಟ “ಕೆಟ್ಟ ಪರಿಸ್ಥಿತಿ” ಎಂದು ಬಣ್ಣಿಸಿದ್ದು ಭಾರತಕ್ಕೆ ವಾಪಸ್ ಬರಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತ ಸರ್ಕಾರ, ಭಾರತೀಯ ಪ್ರಜೆಗಳ ಬಗ್ಗೆ ಕಾಳಜಿ ವಹಿಸಿದ ಪರಿಣಾಮ ಇರಾನ್‍ನಲ್ಲಿ ಭಾರತೀಯರು ಯಾವುದೇ ಅಡ್ಡಿ ಇಲ್ಲದೆ ಬರಲು ಸಹಕಾರಿಯಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂಧನೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಇರಾನ್‍ನಲ್ಲಿ ಅಲ್ಲಿ ಒಂದು ತಿಂಗಳು ಇದ್ದೆವು. ಆದರೆ ಕಳೆದ ಒಂದು ಅಥವಾ ಎರಡು ವಾರಗಳಿಂದ ಮಾತ್ರ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು..ಹೊರಗೆ ಹೋದಾಗ, ಪ್ರತಿಭಟನಾಕಾರರು ಕಾರಿನ ಮುಂದೆ ಬರುತ್ತಿದ್ದರು. ಅವರು ಸ್ವಲ್ಪ ತೊಂದರೆ ಉಂಟುಮಾಡುತ್ತಿದ್ದರು.ಇಂಟರ್ನೆಟ್ ಸ್ಥಗಿತಗೊಂಡಿತ್ತು, ಕುಟುಂಬಗಳಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿರುವ ಮತ್ತೋರ್ವ ಪ್ರಜೆ ಮಾತನಾಡಿ ಅಶಾಂತಿಯಿಂದ ಉಂಟಾಗುವ ಅಪಾಯಗಳ ಬಗ್ಗೆ ಮಾಹಿತಿ ನೀಡಿ ಭಾರತ ಸರ್ಕಾರ ಬಹಳ ಒಳ್ಳೆಯ ಪ್ರಯತ್ನ ಮಾಡಿದೆ ಮತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿರುಗುತ್ತಿರುವವರ ಕುಟುಂಬ ಸದಸ್ಯರು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಅವರಲ್ಲಿ ತೀರ್ಥಯಾತ್ರೆಗೆ ಇರಾನ್‍ಗೆ ಪ್ರಯಾಣಿಸಿದ್ದ ಚಿಕ್ಕಮ್ಮನ ಆಗಮನಕ್ಕಾಗಿ ಕಾಯುತ್ತಿದ್ದ ಕುಟುಂಬವೂ ಇತ್ತು.
ಹೆಂಡತಿಯ ಚಿಕ್ಕಮ್ಮ ತೀರ್ಥಯಾತ್ರೆಗೆ ಇರಾನ್‍ಗೆ ಹೋಗಿದ್ದರು.ಇರಾನ್ ಯಾವಾಗಲೂ ಭಾರತದ ಉತ್ತಮ ಸ್ನೇಹಿತ ಮತ್ತು ನಾವು ನಿರಂತರವಾಗಿ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ.

























