ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಅ.25:- ಸ್ನಾನದ ಕೋಣೆಯಲ್ಲಿ ಬಿಸಿ ನೀರು ಕಾಯಿಸಲು ಉಪಯೋಗಿಸುತ್ತಿದ್ದ ಗ್ಯಾಸ್ ಗೀಜರ್‍ನಿಂದ ಬರುವ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಸ್ನಾನದ ಮನೆಯಲ್ಲಿದ್ದ ಇಬ್ಬರು ಯುವತಿಯರು ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.
ಗುಲ್ಪಮ್ ತಾಜ್ (23) ಮತ್ತು ಸಿಮ್ರಾನ್ ತಾಜ್ (21) ಮೃತಪಟ್ಟಿರುವ ಯುವತಿಯರು. ತಾಲ್ಲೂಕಿನ ಬೆಟ್ಟದಪುರದಿಂದ ವ್ಯಾಪಾರದ ಸಲುವಾಗಿ ಪಿರಿಯಾಪಟ್ಟಣಕ್ಕೆ ಒಂದು ವರ್ಷದ ಹಿಂದೆ ಬಂದು ನೆಲಸಿದ್ದ ಅಲ್ತಾಫ್ ಪಾಷ ಎಂಬುವರ ಮಕ್ಕಳಾದ ಮೃತ ಸಹೋದರಿಯರು ಗುರುವಾರ ರಾತ್ರಿ 7 ಸಮಯದಲ್ಲಿ ಸ್ನಾನ ಮಾಡಲೆಂದು ಒಟ್ಟಿಗೆ ಸ್ನಾನದ ಕೋಣೆಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೃತ ಯುವತಿಯರ ತಂದೆ ಶುಕ್ರವಾರ ಪಟ್ಟಣದ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಸಹಜ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿರುವ ಪಿರಿಯಾಪಟ್ಟಣ ಪೆÇಲೀಸರು ತನಿಖೆ ನಡೆಸುತ್ತಿದ್ದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವತಿಯರ ಶವ ಪರೀಕ್ಷೆ ನಡೆಸಿ ಮೃತರ ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದಾರೆ.

























