Home ಜಿಲ್ಲೆ ಇನ್ನಾರೆಡ್ಡಿ ಕಾಲೋನಿಯ ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಇನ್ನಾರೆಡ್ಡಿ ಕಾಲೋನಿಯ ಮನೆಯಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.23: ನಗರದ ಇನ್ನಾರೆಡ್ಡಿ ಕಾಲೋನಿಯಲ್ಲಿನ ಗುತ್ತುಗೆದಾರ ಶ್ರೀಧರ್ ಅವರ  ಮನೆಯಲ್ಲಿ ಮೊನ್ನೆ ರಾತ್ರಿ ಮೂವರು ಕಳ್ಳರು ನುಗ್ಗಿ 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಡೆದಿದ್ದು.ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನಕ್ಕೆ ಬಂದ ತಂಡದ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಿಟಿಕಿ ಸರಳು ತುಂಡರಿಸಿ ಮನೆ ಹೊಕ್ಕಿರುವ ಕಳ್ಳರು.ಕುಟುಂಬಸ್ಥರು ನಿದ್ರಿಸುತ್ತಿದ್ದ ಕೊಠಡಿ ಹೊರತುಪಡಿಸಿ ಇಡೀ ಮನೆ ಜಾಲಾಡಿದ್ದಾರೆ. 211 ಗ್ರಾಂ ಚಿನ್ನ ಹಾಗೂ 1,200 ಗ್ರಾಂ ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ.

ಕಳ್ಳರು ಕ್ಲೋರೋಫಾರ್ಮ್ ಮಾದರಿಯ ರಾಸಾಯನಿಕ ಬಳಸಿ ಮಲಗಿದ್ದವರನ್ನು ಮಂಪರು ಮಾಡಿದ್ದಾರೆ ಎನ್ನಲಾಗ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನ್ ಪೆನ್ನೇಕರ್ ಭೇಟಿ ಪರಿಶೀಲನೆ ಮಾಡಿ ಕಳ್ಳರ ಪತ್ತೆ ಯತ್ನ ನಡೆಸಿದ್ದಾರಂತೆ