ಇತ್ತೀಚಿನ ನಾಟಕಗಳಲ್ಲಿ ಮೂಲಭೂತ ಆಶಯ ಕಣ್ಮರೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.03:-
ಇತ್ತೀಚಿನ ದಿನಗಳಲ್ಲಿ ಕಿರುತರೆ ಸೇರಿದಂತೆ ವರ್ತಮಾನದ ಕೆಲವು ಕಂಪನಿ ನಾಟಕಗಳು ತಮ್ಮ ಚಹರೆ ಪಟ್ಟಿಗಳನ್ನು ಅಥವಾ ಮೂಲಭೂತ ಆಶಯಗಳನ್ನು ಮರೆಗೆ ಸರಿಸುತ್ತಿವೆ ಎಂದು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೊಳ ಬೇಸರಿಸಿದರು.

ನಗರದ ಲಕ್ಷ್ಮೀಪುರಂನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕೆಎಸ್‍ಜಿಎಚ್ ಸಭಾಂಗಣದಲ್ಲಿ ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದ ಸಹಯೋಗದಲ್ಲಿ ಬುಧÀವಾರ ನಡೆದ 15 ದಿನಗಳ ರಂಗ ಸಂಗೀತ ಮತ್ತು ಅಭಿನಯ ರಂಗಗೀತೆಗಳ ಕಲಿಕಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಕನ್ನಡ ರಂಗಭೂಮಿಗೆ 150ಕ್ಕೂ ಹೆಚ್ಚು ವರ್ಷಗಳ ರಂಗಸಂಸ್ಕೃತಿಯ ಇತಿಹಾಸವಿದೆ. ಈ 150ಕ್ಕೂ ಹೆಚ್ಚು ವರ್ಷದ ಇತಿಹಾಸದುದ್ದಕ್ಕೂ ವೃತ್ತಿ ರಂಗಭೂಮಿ ತನ್ನ ಪರಂಪರೆ ಕಾಪಾಡಿಕೊಂಡು ಬಂದಿರುವ ಐತಿಹ್ಯ ಕೂಡ ಇದೆ. ಈ 150 ವರ್ಷಗಳ ಇತಿಹಾಸದಲ್ಲಿ ಕನ್ನಡ ರಂಗಭೂಮಿ ತನ್ನ ವಿವಿಧÀ ಸ್ಥಿತ್ಯಂತರಗಳನ್ನು ಕಂಡಿದೆ ಎಂದರು.

ವೃತ್ತಿ ರಂಗಭೂಮಿಯಲ್ಲಿ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ ಮತ್ತು ರಂಗ ಸಜ್ಜಿಕೆ ಎಂಬ ಮೂರು ಮುಖ್ಯ ಪರಂಪರೆಗಳಿವೆ. ಈ ಮೂರು ಮುಖ್ಯ ಪರಂಪರೆಗಳನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದೆ. ಹೀಗಾಗಿ ಸೃಜನಶೀಲವಾಗಿರುವಂತಹ ವೃತ್ತಿ ರಂಗಭೂಮಿ ಪರಂಪರೆಯನ್ನು ಮತ್ತೆ ಪುನಶ್ಚೇತನಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕಂದ ಪದ್ಯಗಳು, ಸೀಸ ಪದ್ಯಗಳು ಇಂದಿನ ನಾಟಕಗಳಲ್ಲಿ ಕಂಡುಬರುತ್ತಿಲ್ಲ. ಆದರೆ, ನಾಟಕಗಳಿಗೆ ಇದರ ಅಗತ್ಯವಿದೆ. ಇಂದಿಗೂ ಕೂಡ ವಿವಿಧ ರಾಜ್ಯಗಳಲ್ಲಿ ಸಮಗ್ರ ರಂಗಭೂಮಿಯ ಕಲ್ಪನೆಯಿಂದಾಗಿ ವೃತ್ತಿ ರಂಗಭೂಮಿ ಅಥವಾ ನಾಟಕ ಸಂಗೀತ ಇಂದಿಗೂ ಇದೆ. ಹಿಂದೆ ಸ್ವರ ಶುದ್ಧಿಯಾಗಿದ್ದರೆ ಮಾತ್ರ ನಾಟಕಗಳಿಗೆ ಕರೆದುಕೊಳ್ಳುತ್ತಿದ್ದರು. ಹೀಗೆಯೇ ಒಂದು ರಂಗಭೂಮಿಯ ನಾಟಕಕ್ಕೆ ಹೋಗಬೇಕಾದರೆ ಅವರ ಸ್ವರ ಜ್ಞಾನ ಬಹಳ ಮುಖ್ಯವಾಗಿರಬೇಕು ಎಂದು ತಿಳಿಸಿದರು.

ಅಧ್ಯಯನದ ಪ್ರಕಾರಕ ಮೈಸೂರು ಜಿಲ್ಲೆ ಅಥವಾ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳು ಇಂದಿಗೂ ಪ್ರಚಲಿತದಲ್ಲಿವೆ. ತುಮಕೂರು ಜಿಲ್ಲೆಯಲ್ಲೇ 120 ನಾಟಕ ತಂಡಗಳಿವೆ. ಆ ನಾಟಕ ತಂಡಗಳು ಹಳ್ಳಿಯಲ್ಲಿ ವರ್ಷಕ್ಕೆ 1 ರಿಂದ 2 ನಾಟಕ ಮಾಡುತ್ತದೆ. ಕರ್ನಾಟದಲ್ಲಿ ವರ್ಷಕ್ಕೆ 15 ರಿಂದ 18 ಸಾವಿರ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ನಾಗೇಶ್ ವಿ.ಬೆಟ್ಟಕೋಟೆ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸಂಸ್ಥಾನದಲ್ಲಿ ವೃತ್ತಿರಂಗ ತಂಡಗಳನ್ನು ಕಟ್ಟುವುದುಕ್ಕೆ ಸಹಕಾರ ಕೊಟ್ಟಿದ್ದರು. ನಾಲ್ವಡಿ ಅವರು ಸ್ವತಃ ನಾಟಕಗಳ ರಚನೆಯನ್ನು ಮಾಡಿದ್ದರು. ನೃತ್ಯ, ನಾಟಕ, ಸಂಗೀತ ಕಲೆಗಳಿಗೆ ಮೈಸೂರು ಸಂಸ್ಥಾನದ ರಾಜರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಂಗ ಸಮಾಜದ ಸದಸ್ಯ ಎಚ್.ಎಸ್.ಸುರೇಶಬಾಬು, ಶಿಬಿರದ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ವೈ.ಎಂ.ಪುಟ್ಟಣ್ಣಯ್ಯ, ಶಿಬಿರದ ಸಂಚಾಲಕ ಸುಪ್ರೀತ್ ಎಸ್.ಭಾರದ್ವಾಜ್ ಸೇರಿದಂತೆ ಇತರರು ಹಾಜರಿದ್ದರು.