Home ಸುದ್ದಿ ರಾಷ್ಟ್ರೀಯ ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟ: ವಿಮಾನ ಹಾರಾಟ ವ್ಯತ್ಯಯ

ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟ: ವಿಮಾನ ಹಾರಾಟ ವ್ಯತ್ಯಯ

ಜಕಾರ್ತಾ,ಸೆ.6- ಇಂಡೋನೇಷ್ಯಾದ ಸಕ್ರಿಯ ಜ್ವಾಲಾಮುಖಿ ಅನಕ್ ಕ್ರಾಕಟೋವಾ' ಇಂದು ಮುಂಜಾನೆ ಭೀಕರವಾಗಿ ಸ್ಫೋಟಗೊಂಡಿದೆ. ಜ್ವಾಲಾಮುಖಿಯಿಂದ ಹೊರಬಂದ ಬೂದಿಯು ಸುಮಾರು 50,000 ಅಡಿ ಎತ್ತರಕ್ಕೆ ಚಿಮ್ಮಿದ್ದು, ಪಶ್ಚಿಮ ಇಂಡೋನೇಷ್ಯಾದ ವಿಶಾಲ ಪ್ರದೇಶವನ್ನು ಆವರಿಸಿದೆ. ಈ ದಿಢೀರ್ ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಭೀಕರ ಸ್ಫೋಟ: 50,000 ಅಡಿ ಎತ್ತರಕ್ಕೆ ಆವರಿಸಿದ ಬೂದಿ, 209 ವಿಮಾನಗಳ ಸಂಚಾರ ಸ್ಥಗಿತ ಜಕಾರ್ತಾ: ಇಂಡೋನೇಷ್ಯಾದ ಸಕ್ರಿಯ ಜ್ವಾಲಾಮುಖಿ ಅನಕ್ ಕ್ರಾಕಟೋವಾ’ ಇಂದು ಮುಂಜಾನೆ ಭೀಕರವಾಗಿ ಸ್ಫೋಟಗೊಂಡಿದೆ. ಜ್ವಾಲಾಮುಖಿಯಿಂದ ಹೊರಬಂದ ಬೂದಿಯು ಸುಮಾರು 50,000 ಅಡಿ ಎತ್ತರಕ್ಕೆ ಚಿಮ್ಮಿದ್ದು, ಪಶ್ಚಿಮ ಇಂಡೋನೇಷ್ಯಾದ ವಿಶಾಲ ಪ್ರದೇಶವನ್ನು ಆವರಿಸಿದೆ. ಈ ದಿಢೀರ್ ವಿಕೋಪದಿಂದಾಗಿ ರಾಜಧಾನಿ ಜಕಾರ್ತಾದ ಸೂಕರ್ನೊ-ಹಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ನೂರಾರು ವಿಮಾನಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.


ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವಿನ ಸುಂದಾ ಜಲಸಂಧಿಯಲ್ಲಿರುವ ಈ ಜ್ವಾಲಾಮುಖಿ ದ್ವೀಪವು ಶನಿವಾರದಿಂದಲೇ ತೀವ್ರ ಚಟುವಟಿಕೆಗಳ ಲಕ್ಷಣಗಳನ್ನು ತೋರಿಸುತ್ತಿತ್ತು. ಭಾನುವಾರ ಬೆಳಗಿನ ಜಾವ 3:53 ರ ಸುಮಾರಿಗೆ ಸುಮಾರು 30 ಸೆಕೆಂಡುಗಳ ಕಾಲ ಪ್ರಬಲ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ ಜಕಾರ್ತಾ, ಸುಮಾತ್ರಾದ ಕೆಲವು ಭಾಗಗಳು ಹಾಗೂ ದಕ್ಷಿಣ ತುದಿಯ ಲ್ಯಾಂಪಂಗ್ ಪ್ರಾಂತ್ಯದಾದ್ಯಂತ ಬೂದಿಯ ಮೋಡಗಳು ಆವರಿಸಿಕೊಂಡವು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 5:30 ರಿಂದ 9:30 ರವರೆಗೆ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.
ಈ ಜ್ವಾಲಾಮುಖಿ ಸ್ಫೋಟದಿಂದಾಗಿ ಒಟ್ಟು 209 ವಿಮಾನಗಳ ಸೇವೆ ಸಂಪೂರ್ಣವಾಗಿ ರದ್ದುಗೊಂಡಿದ್ದು, ಸುಮಾರು 22,800 ಪ್ರಯಾಣಿಕರು ಪರದಾಡುವಂತಾಯಿತು. ವಿಮಾನ ನಿಲ್ದಾಣದಲ್ಲಿ ರಾತ್ರಿಯಿಡೀ ನಿಲ್ಲಿಸಲಾಗಿದ್ದ 170 ವಿಮಾನಗಳು ನೆಲದಲ್ಲೇ ಉಳಿದುಕೊಂಡವು. ಹಾಂಗ್ ಕಾಂಗ್, ಸಿಡ್ನಿ, ಆಮ್ಸ್ಟರ್‍ಡ್ಯಾಮ್, ಸಿಯೋಲ್, ದೋಹಾ, ಕೌಲಾಲಂಪುರ ಮತ್ತು ಸಿಂಗಾಪುರಕ್ಕೆ ತೆರಳಬೇಕಿದ್ದ ಪ್ರಮುಖ ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಅಥವಾ ವಿಳಂಬಗೊಂಡಿವೆ. ಇದಲ್ಲದೆ, ದಕ್ಷಿಣ ಸುಲವೇಸಿಯ ಮಕಾಸ್ಸರ್, ಲ್ಯಾಂಪಂಗ್, ಬಾಲಿ ಹಾಗೂ ಸುರಬಯಾಗೆ ಸಂಪರ್ಕ ಕಲ್ಪಿಸುವ ದೇಶೀಯ ವಿಮಾನ ಸೇವೆಗಳ ಮೇಲೆಯೂ ಗಂಭೀರ ಪರಿಣಾಮ ಬೀರಿದೆ.


ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ತಮ್ಮ ಲಗೇಜ್‍ಗಳನ್ನು ಹಿಂಪಡೆದು ಟಿಕೆಟ್ ಮರುಪಾವತಿಗೆ (ರಿಫಂಡ್) ಪಟ್ಟುಹಿಡಿದರು. ಪ್ರಸ್ತುತ ಸ್ಥಿತಿಗತಿಯನ್ನು ಇಂಡೋನೇಷ್ಯಾದ ನಾಗರಿಕ ವಿಮಾನಯಾನ ಇಲಾಖೆಯು ಹವಾಮಾನ ಸಂಸ್ಥೆ ಹಾಗೂ ವಿಮಾನಯಾನ ಕಂಪನಿಗಳೊಂದಿಗೆ ನಿಕಟವಾಗಿ ಪರಿಶೀಲಿಸುತ್ತಿದೆ.


ಸದ್ಯದ ಮಟ್ಟಿಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಮತ್ತು ಜನರನ್ನು ಸ್ಥಳಾಂತರಿಸುವ ಆದೇಶಗಳನ್ನು ಹೊರಡಿಸಿಲ್ಲ. ಜ್ವಾಲಾಮುಖಿಗೆ ಹತ್ತಿರದ ಜನವಸತಿ ಪ್ರದೇಶವು 16 ಕಿಲೋಮೀಟರ್ ದೂರದಲ್ಲಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಜ್ವಾಲಾಮುಖಿ ಕೇಂದ್ರದಿಂದ ಕನಿಷ್ಠ 3 ಕಿಲೋಮೀಟರ್ ದೂರವಿರಲು ಭೂವೈಜ್ಞಾನಿಕ ಸಂಸ್ಥೆ ಸೂಚಿಸಿದೆ.
ರಾಜಧಾನಿ ಜಕಾರ್ತಾದ ಸೂಕರ್ನೊ-ಹಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ನೂರಾರು ವಿಮಾನಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.