
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.16 ಪಟ್ಟಣದಲ್ಲಿ ಇಂಜಿನಿಯರ್ಸ್ ಸಿ ಎ ಸೈಟ್ ತೆಗೆದುಕೊಂಡರೆ ಭವನ ನಿರ್ಮಾಣಕ್ಕೆ ಮೊದಲು 25 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ ಭರವಸೆ ನೀಡಿದರು. ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ 165 ನೆಯ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ ಎಂ ವಿಶ್ವೇಶ್ವರಯ್ಯನವರು ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ ಡ್ಯಾಂ ಸೇರಿದಂತೆ ಹಲವಾರು ಕಟ್ಟಡಗಳ ನಿರ್ಮಾಣ ಇಂದಿಗೂ ಶಾಶ್ವತವಾಗಿವೆ. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಎಷ್ಟೊಂದು ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ. ಆದರೆ ಆಧುನಿಕ ಯುಗದಲ್ಲಿ ಎಷ್ಟೇ ತಂತ್ರಜ್ಞಾನ ಬೆಳೆದರೂ ಅವರು ನಿರ್ಮಿಸಿದ ಕಟ್ಟಡ ಗಟ್ಟಿತನ ಈಗ ಬರುವುದಿಲ್ಲ . ಇಲ್ಲಿಯೂ ಸಹ ಸಾಕಷ್ಟು ಇಂಜಿನಿಯರ್ಸ್ ಇದ್ದಾರೆ ಅವರು ಕೂಡ ಗುಣಮಟ್ಟದ ಕಟ್ಟಡಗಳ ನಿರ್ಮಿಸುವಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ ಎಂದರು. ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಂಜುನಾಥ್ ಇಂಜಿನಿಯರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಕುಮಾರ್ ಇಂಜಿನಿಯರ್ ವಹಿಸಿದ್ದರು. ಭಿನ್ನವತ್ತಳೆ ಇಂಜಿನಿಯರ್ ವಿಶ್ವನಾಥ್ ಓದಿ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಎಂ ಎಸ್ ಶಶಿಧರ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣ್ ನಾಯ್ಕ್, ಪುರಸಭೆ ಇಂಜಿನಿಯರ್ ಗೋಪಾಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಜಗದೀಶ್ ಜಿಎಂ, ಕೇಶವ ರೆಡ್ಡಿ,ಉಮಾಪತಿ,ಜಿ.ವಿಜೇತ, ಪ್ರಭಾಕರ್ ಶೆಟ್ಟಿ ವೆಂಕಟೇಶ್ಇತರರಿದ್ದರು. ಕಾರ್ಯಕ್ರಮದ ಪ್ರಾರ್ಥನೆ ಭಾರತಿ,ನಿರೂಪಣೆ ಸರ್ವ ಮಂಗಳ, ಸ್ವಾಗತ ನಂದೀಶ್ ನಿರ್ವಹಿಸಿದರು.























