Home ಜಿಲ್ಲೆ ಮೈಸೂರು ಆ.29ಕ್ಕೆ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ

ಆ.29ಕ್ಕೆ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ

ಸಂಜೆವಾಣಿ ನ್ಯೂಸ್
ಮೈಸೂರು, ಆ.27:-
ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 28ನೇ ಪೀಠಾಧಿಪತಿ ಪರಮಪೂಜ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವವು ಆ.29ರ ಶನಿವಾರ ಮೈಸೂರಿನ ಸುತ್ತೂರು ಶ್ರೀಮಠದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠ ತಿಳಿಸಿದೆ.

ಪರಮಪೂಜ್ಯ ಶ್ರೀಗಳು 29-08-1916ರಲ್ಲಿ ಜನಿಸಿ, 28-02-1928ರಲ್ಲಿ 12ನೇ ವಯಸ್ಸಿನಲ್ಲಿ ಪಟ್ಟಾಧಿಕಾರ ವಹಿಸಿ ಅನ್ನ, ಅಕ್ಷರ, ಆರೋಗ್ಯದ ಮೂಲಕ ಸಮಾಜ ಸೇವೆಗೆ ಭದ್ರ ಬುನಾದಿ ಹಾಕಿದ ಮಹಾನ್ ಚೇತನ.
ರೋಬೋಟ್ ಆನೆ ಮೆರವಣಿಗೆ – ಈ ಬಾರಿಯ ವಿಶೇಷ:
ಪ್ರಾಣಿದಯೆ ಮತ್ತು ವನ್ಯಜೀವಿ ಸಂರಕ್ಷಣೆ ಸಂದೇಶಕ್ಕಾಗಿ ಈ ಬಾರಿ ನೈಜ ಆನೆ ಬದಲಿಗೆ ರೋಬೋಟ್ ಆನೆ ಮೇಲೆ ಪೂಜ್ಯರ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಬೆಳಿಗ್ಗೆ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜಿನಿಂದ ಶ್ರೀಮಠದವರೆಗೆ ರೋಡ್ ಶೋ ನಡೆಯಲಿದೆ.

ಧರ್ಮಸಭೆಯಲ್ಲಿ ಗಣ್ಯರ ದಂಡು:
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ

  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ – ಅಧ್ಯಕ್ಷತೆ
  • ಡಾ.ಜಿ.ಪರಮೇಶ್ವರ್ – ಜೆಎಸ್‍ಎಸ್ ವಿಜ್ಞಾನ ವಾಹಿನಿ (Sಛಿieಟಿಛಿe oಟಿ Wheeಟs) ಗೆ ಚಾಲನೆ
  • ಡಾ.ಯತೀಂದ್ರ ಸಿದ್ದರಾಮಯ್ಯ – ‘ರಾಜೇಂದ್ರ ನುಡಿ ನಮನ’ 2ನೇ ಆವೃತ್ತಿ ಬಿಡುಗಡೆ
  • ಸಚಿವ ಸಿ.ಪುಟ್ಟರಂಗಶೆಟ್ಟಿ – ‘ಒಚಿಟಿ ತಿiಣh ಆiviಟಿiಣಥಿ: Pooರಿಥಿಚಿ ಖಚಿರಿeಟಿಜಡಿಚಿ Shಡಿee’ ಬಿಡುಗಡೆ
  • ಶಾಸಕ ಡಾ.ಹೆಚ್.ಸಿ.ಮಹದೇವಪ್ಪ – ‘ನಮ್ಮೊಳಗಿಂದ ದೈವ: ಪೂಜ್ಯ ರಾಜೇಂದ್ರ ಶ್ರೀ’ ಬಿಡುಗಡೆ
  • ಸಂಸದ ಯದುವೀರ್ ಒಡೆಯರ್ – ಪ್ರಸಾದ ವಿಶೇಷ ಸಂಚಿಕೆ ಬಿಡುಗಡೆ
  • ಮಾಜಿ ಸಂಸದ ಸುನೀಲ್ ಬೋಸ್ – ಜೆಎಸ್‍ಎಸ್ ವಾರ್ತಾಪತ್ರ ವಿಶೇಷ ಸಂಚಿಕೆ ಬಿಡುಗಡೆ
    ಮೈಸೂರು-ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ನಿವೃತ್ತರಿಗೆ ಅಭಿನಂದನೆ: 01-09-2025 ರಿಂದ 31-08-2026ರವರೆಗೆ ನಿವೃತ್ತರಾದ 115 ನೌಕರರು, ಸೇವೆಯಿಂದ ಬಿಡುಗಡೆಗೊಂಡ 51 ಜನರಿಗೆ ಅಭಿನಂದನೆ, ಸೇವೆಯಲ್ಲಿರುವಾಗ ಅಗಲಿದ 13 ಜನರ ಕುಟುಂಬಕ್ಕೆ ಸಾಂತ್ವನ. ಎಸ್‍ಎಸ್‍ಎಲ್ಸಿ, ಪಿಯುಸಿ, ಸಿಬಿಎಸ್‍ಇ ಟಾಪರ್‍ಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮೈಸೂರು ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ, ನೇತ್ರ-ರಕ್ತ-ಅಂಗಾಂಗ ದಾನ ಮಾಹಿತಿ ಕೇಂದ್ರ.
ಜೆಎಸ್‍ಎಸ್ ಗ್ರಂಥಮಾಲೆ ಪುಸ್ತಕಗಳಿಗೆ ಆ.29 ರಿಂದ ಸೆ.30 ರವರೆಗೆ ಶೇ.50 ರಿಯಾಯಿತಿ. ಭಕ್ತಾದಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.