
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.12: ಹಲವಾರು ಸಾಮಾಜಿಕ ಸೆರವಾ ಚಟುವಟಿಕೆಗಳನ್ನು ಕೈಗೊಳ್ಳುತ್ತಾ ಬಂದಿರುವ ನಗರದ ಸನ್ಮಾನ ಗೆಳೆಯರ ಸಂಸ್ಥೆಯು ಉದಯಪುರದ ನಾರಾಯಣ ಸೇವಾ ಸಂಸ್ಥೆ ಸಹಯೋಗದಲ್ಲಿ ಮಾಡ್ಯುಲರ್ ಕೃತಕ ಕೈ ಕಾಲಿನ ಅಂಗಾಂಗಳ ಅಳವಡಿಕೆಯ ಉಚಿತ ಶಿಬಿರವನ್ನು ನಗರದಲ್ಲಿ ಹಮ್ಮಿಕೊಳ್ಳುತ್ತಿದೆ.
ನಗರದ ಸಿರುಗುಪ್ಪ ರಸ್ತೆಯಲ್ಲಿನ ಕ್ಲಾಸಿಕ್ ಎ/ಸಿ ಪಂಕ್ಷನ್ ಹಾಲ್ ನಲ್ಲಿ ಅಗಷ್ಟ್ 16 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಆಯೋಜಿಸಿದೆ.
ಜರ್ಮನ್ ತಂತ್ರಜ್ಞಾನದಿಂದ. ಮಾಡ್ಯುಲರ್ ಕೃತಕ ಕೈ ಕಾಲಿನ ಅಂಗಗಳ ಮಾಪನದ ಕಾರ್ಯವನ್ನು ಈ ಉಚಿತ ಬೃಹತ್ ಶಿಬಿರದಲ್ಲಿ 35 ಕ್ಕೂ ಹೆಚ್ಚು ಉದಯಪುರದಿಂದ ಆಗಮಿಸುವ ವೈದ್ಯರ ತಂಡದಿಂದ 6 ಕೌಂಟರ್ ಗಳ ಮೂಲಕ ನಡೆಸುತ್ತಿದೆ ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಹೆಚ್ ಲಕ್ಷ್ಮೀಕಾಂತರೆಡ್ಡಿ ಸಂಜೆವಾಣಿಗೆ ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಅಳವಡಿಸುವ ಕೃತಕ ಮಾಡ್ಯುಲರ್ ಕೈ ಕಾಲುಗಳಿಂದ ಸಹಜ ಕೈ ಕಾಲಿನಂತೆ ಚಲನ ವಲನ ಮಾಡಬಹುದು. ಈ ಮೊದಲಿನ ಜೈ ಪುರದ ಕೃತಕ ಕೈ ಕಾಲುಗಳಂತೆ ಅಲ್ಲ.
ಈ ಶಿಬಿರಕ್ಕೆ ದೇಶದ ವಿವಿಧ ರಾಜ್ಯಗಳಿಂದ 1500 ಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಗೆ ಬರುವ ಅವರಿಗೆ ಸ್ಥಳೀಯವಾಗಿ ಸಾರಿಗೆ ಊಟ, ಉಪಹಾರ, ವಸತಿ ವ್ಯವಸ್ಥೆ ಮಾಡುತ್ತಿದೆ.
ಬಳ್ಳಾರಿ ಜಿಲ್ಲೆಯವರು ಶಿಬಿರ ನಡೆಯುವ ದಿನವೂ ಸಹ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಶಿಬಿರದಲ್ಲಿ ಅಳತೆ ತೆಗೆದುಕೊಂಡು ಅರ್ಹರಿಗೆ ಎರೆಡು ತಿಂಗಳನಂತರ ಕೃತಕ ಅಂಗಾಗಳನ್ನು ಅಳವಡಿಸಲಾಗುತ್ತದೆ. ಒಂದೊಂದು ಅಂಗ ಕನಿಷ್ಟ 75 ಸಾವಿರದಿಂದ ಒಂದು ವರೆ ಲಕ್ಷದ ವರೆಗೆ ವೆಚ್ಚದ್ದಾಗಿರುತ್ತವೆ.

































