Home ಜಿಲ್ಲೆ ಮಂಗಳೂರು ‘ಆಶ್ಲೇಷ ಆನ್‌ಲೈನ್ ಸರ್ವೀಸ್ ಸೆಂಟರ್ ಅಗ್ನಿ ಅವಘಡ

‘ಆಶ್ಲೇಷ ಆನ್‌ಲೈನ್ ಸರ್ವೀಸ್ ಸೆಂಟರ್ ಅಗ್ನಿ ಅವಘಡ

ಕುಂದಾಪುರ-ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ?೬೬ರ ಕನ್ನುಕೆರೆ ಸಮೀಪದ ಶ್ರೀನವಶಕ್ತಿ ಕಲ್ಯಾಣ ಮಂಟಪದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ‘ಆಶ್ಲೇಷ ಆನ್‌ಲೈನ್ ಸರ್ವೀಸ್ ಸೆಂಟರ್ ನಲ್ಲಿ ಫೆ. ೧೬ರ ಸೋಮವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ವರದಿಯಾಗಿದೆ.
ಅಂಗಡಿ ಮಾಲೀಕ ಫಣಿರಾಜ್ ಹತ್ವಾರ್ ಕೊರವಡಿ ಅವರು ನಿತ್ಯದಂತೆ ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ ಬಳಿಕ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದಿಂದ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಸ್ಟೇಷನರಿ ಸಾಮಗ್ರಿಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಟೇಬಲ್ ಸೇರಿದಂತೆ ಅನೇಕ ಪರಿಕರಗಳು ಸುಟ್ಟು ಭಸ್ಮವಾಗಿವೆ.
ಈ ಘಟನೆಯಿಂದ ಅಂದಾಜು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯ ಯುವಕರು ತುರ್ತಾಗಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬಳಿಕ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದರು.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.