Home ಜಿಲ್ಲೆ ಬೆಂಗಳೂರು ಆಶಾ ನಿಕೇತನ್ ಬುದ್ಧಿ ಮಾಂದ್ಯರ ನಿಲಯಕ್ಕೆ ದಿನಸಿ ಸಾಮಾಗ್ರಿಗಳ ವಿತರಣೆ.

ಆಶಾ ನಿಕೇತನ್ ಬುದ್ಧಿ ಮಾಂದ್ಯರ ನಿಲಯಕ್ಕೆ ದಿನಸಿ ಸಾಮಾಗ್ರಿಗಳ ವಿತರಣೆ.

ಬೆಂಗಳೂರು.ಏ2-ರಾಜರಾಜಶ್ವರಿನಗರದ ವಿಜಯನಗರ ಸ್ಪೂರ್ಟ್ ಆಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಎಫ್.ಎಂ.ಆರ್.ಇಂಡಿಯಾ ಆಶಾ ನಿಕೇತನ್ ಬುದ್ಧಿ ಮಾಂದ್ಯರ ನಿಲಯಕ್ಕೆ ದಿನಸಿ ಸಾಮಾಗ್ರಿಗಳನ್ನು ಅಧ್ಯಕ್ಷರಾದ ಬಿ.ಟಿ.ಕೋದಂಡರಾಮು, ಉಪಾಧ್ಯಕ್ಷರಾದ ಎಲ್.ಜಗದೀಶ್, ಕಾರ್ಯದರ್ಶಿ ದಿನೇಶ್ ಜಿ.ಎಸ್., ಪದಾಧಿಕಾರಿಗಳಾದ ಬಿ.ಕೊಟ್ರೇಶಪ್ಪ,ಶ್ರೀನಿವಾಸ್ ದಿನೇಶ್ ಬಿ.ಸಿ. (ಗುತ್ತಿಗೆದಾರ) ವೈ.ಎಸ್.ಶಿವರಾಜು, ಭೀಮಪ್ಪ ದಾಶ್ಯಾಳ ಕಿಶೋರ್ ಬಿ.ದೇಸಾಯಿ, ಶ್ರೀಮತಿ ಹರಿಣಿ, ಆ?ಯಂಟಿನಿ ಮೆಂಡೋನ್ಸಾ ನವೀನ್ ಕುಮಾರ್ ಗೌಡ, ವಿಜಯಕುಮಾರ್ ಸೂಲಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರ ಬಿ.ವಿ., ಕೋರಮಂಗಲ ಇನ್ಸ್ ಪೆಕ್ಟರ್ ರೆಡ್ಡಿರವರು ನೀಡಿದರು.

ಅಧ್ಯಕ್ಷರಾದ ಕೋದಂಡರಾಮುರವರು ಮಾತನಾಡಿ ವಿಜಯನಗರ ಸ್ಪೂಟ್ರ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ , ಪರಿಸರ ಹಾಗೂ ಹಸಿವಿನಿಂದ ಯಾರು ಬಳಲಬಾರದು ಹಸಿವು ಮುಕ್ತವಾಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಪ್ರತಿವರ್ಷ ಬೆಂಗಳೂರಿನಲ್ಲಿ ಇರುವ ಆನಾಥಶ್ರಮ ಮತ್ತು ವೃದ್ದಾಶ್ರಮಗಳಿಗೆ ಆಹಾರ ಸಾಮಾಗ್ರಿಗಳನ್ನು ನೀಡುತ್ತಿದೆ. ಕಾಯಕವೇ ಕೈಲಾಸ ಎಂಬಂತೆ ನಾವು ದುಡಿಮೆಯ ಹಣದ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ದಿಗಾಗಿ ವಿನಿಯೋಗಿಸಲಾಗುತ್ತಿದೆ.

ನಾನು ಎಂಬುದು ಅಹಂಕಾರ, ನಾವೆಲ್ಲರು ಎಂದು ಕೊಡಿ ಬಾಳಿದರೆ ಸ್ವರ್ಗ ಸುಖ ಅದ್ದರಂತೆ ವಿಜಯನಗರ ಸ್ಪೂಟ್ರ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.

ಕ್ಲಬ್ ಸಿಬ್ಬಂದಿಗಳಾದ ನಾಗರಾಜ್, ಪ್ರತಾಪ್, ಮಹೇಶ, ನವೀನ್, ಪಾಂಡು ವೆಂಕಟೇಶ್ ರವರು ಉಪಸ್ಥಿತರಿದ್ದರು.