Home ಜಿಲ್ಲೆ ಮಂಗಳೂರು ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಶಿಲಾನ್ಯಾಸ

ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಶಿಲಾನ್ಯಾಸ

ಸುಳ್ಯ:ಆಲೆಟ್ಟಿಯಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಶಿಲಾನ್ಯಾಸ ನೆರವೇರಿಸಿದರು.
ಎರಡು ಕೋಟಿ ಅನುದಾನದಲ್ಲಿ ಅತ್ಯುತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕು. ಮುಂದಿನ ಜೂನ್ ವೇಳೆ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ನೂತನ ಕಟ್ಟಡ
ಲೋಕಾರ್ಪಣೆಗೆ ಸಿದ್ಧವಾಗುವಂತೆ ನಿರ್ಮಾಣ ಮಾಡುವಂತೆ ಶಾಸಕರು ಸೂಚಿಸಿದರು.
ಆಲೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಸಂತ್, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪ್ರಮುಖರಾದ ತೀರ್ಥರಾಮ ಕುಂಚಡ್ಕ, ಧನಂಜಯ ಕುಂಚಡ್ಕ, ಸತೀಶ್ ಕುಂಭಕ್ಕೋಡು, ಸುಧಾಕರ, ನಾಗರಾಜ ಬಡ್ಡಡ್ಕ, ಉದಯ ಕುಡೆಕಲ್ಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.