ಸಂಜೆವಾಣಿ ವಾರ್ತೆ
ತಿ.ನರಸೀಪುರ ಸೆ.22– ಪಟ್ಟಣದ ತ್ರಿವೇಣಿ ನಗರದಲ್ಲಿರುವ ಜಿಲ್ಲಾ ಸ್ನೇಹ ಬಳಗ ಸಂಘದ ಕಚೇರಿಯಲ್ಲಿ ಮಂಗಳವಾರ ಸರಳವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ವಾದ)ಯ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಎಸ್.ಚಂದ್ರಶೇಖರ್ ಅವರನ್ನು ಸರ್ಕಾರಿ ನೌಕರರು ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮರಿಸ್ವಾಮಿ ಅವರು ಮಾತನಾಡಿ, ದಲಿತ ಸಂಘಟನೆಯ ಹಿರಿಯ ಕಾರ್ಯಕರ್ತರು ಆಗಿರುವ ಆಲಗೂಡು ಚಂದ್ರಶೇಖರ್ ಡಿಎಸ್‍ಎಸ್ ಸಂಘಟನೆಯಲ್ಲಿದ್ದರೂ ಎಲ್ಲ ಜನ ಸಮುದಾಯಗಳ ಅನ್ಯಾಯದ ವಿರುದ್ಧ ಧ್ವನಿಯಾಗಿದ್ದಾರೆ. ನಿಸ್ ಕಲ್ಮಶ ಸೇವೆಯನ್ನು ಗುರುತಿಸಿ ಇವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಬಿರುದು ಪ್ರದಾನವಾಗಿದೆ. ಎರಡು ತಿಂಗಳು ಕಳೆಯುತ್ತಿದ್ದರೂ ನಿರಂತರವಾಗಿ ಎಲ್ಲಾ ಸಮುದಾಯದವರು, ಮಠಾಧೀಶರು, ಆಟೋ, ಕಾರ್ ಸ್ಟ್ಯಾಂಡ್ ಗಳಲ್ಲಿ ಚಾಲಕ ಸ್ನೇಹಿತರಿಂದ, ಖಾಸಗಿ ಬಸ್ ಸ್ಟ್ಯಾಂಡ್ ನಲ್ಲೂ ಖಾಸಗಿ ಬಸ್ ಏಜೆಂಟರ ಸಂಘದಿಂದ ನಿರಂತರವಾಗಿ ಸನ್ಮಾನಿಸುತ್ತಿರುವುದನ್ನು ನಾನು ನೋಡಿದಾಗ ನಿಜಕ್ಕೂ ಹೆಮ್ಮೆಯಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕರಾದ ಅಲಗೂಡು ಸಿದ್ದಪ್ಪಾಜಿ ಅವರು ಮಾತನಾಡಿದರು. ನಿವೃತ್ತ ಶಿಕ್ಷಕ ಗೋವಿಂದ್ ರಾಜ್, ಸರ್ಕಾರಿ ನೌಕರ ಸಂಘದ ರಾಜ್ಯ ಕಾರ್ಯದರ್ಶಿ ಎಂ.ವಿ. ಶಿವಶಂಕರಮೂರ್ತಿ, ತ್ರಿವೇಣಿ ನಗರದ ಯಜಮಾನರಾದ ನಿಂಗರಾಜು, ನಿವೃತ್ತ ಶಿಕ್ಷಕ ಬಸವರಾಜು, ಶಿಕ್ಷಕ ಶ್ರೀನಿವಾಸ್, ಪುರಸಭೆ ನಿವೃತ್ತ ಅಧಿಕಾರಿ ಕೆಂಪರಾಜು, ಸೋಲಾರ್ ನಾಗರಾಜು, ನಿಂಗರಾಜು, ಕೆಎಂಎಫ್ ಡೈರಿಯ ರಾಜೇಶ್ ಮಾವಿನಹಳ್ಳಿ, ಟಿ ಓ ಟಿ ನಾಗರಾಜ್, ಕೆಂಪಯ್ಯನ ಹುಂಡಿ ರಾಜು, ವಕೀಲ ಮಹದೇವ, ಶಿಕ್ಷಕ ಮಹೇಶ್, ಆಲಗೂಡು ಗ್ರಾಮದ ಚೆಸ್ಕಂ ಇಲಾಖೆ ನೌಕರರ ಮಹೇಶ, ಕೂಸಪ್ಪ, ಶಿಕ್ಷಕರಾದ ಸೋಮಶೇಖರ್, ಸ್ವಾಮಿ, ಚಂದ್ರ, ಎಲೆಕ್ಟ್ರಿಕಲ್ ಸಿದ್ದರಾಜು, ನಿವೃತ್ತ ಶಿಕ್ಷಕ ಶಿವ ಮಲ್ಲಯ್ಯ, ಆರೋಗ್ಯ ಇಲಾಖೆಯ ನಾರಾಯಣ ಮೂರ್ತಿ, ಸೋಸ್ಲೆ ನಾಗೇಶ್ ಪೆÇಲೀಸ್ ಮುಖ್ಯಪೇದೆ ಸುರೇಶ್ ಹಾಗೂ ಇತರರು ಇದ್ದರು.



























