Home ಜಿಲ್ಲೆ ಮೈಸೂರು ಆರ್‍ಎಸ್‍ಎಸ್ ವಿಜಯದಶಮಿ: ಗಣವೇಷಧಾರಿಗಳ ಪಥಸಂಚಲನ

ಆರ್‍ಎಸ್‍ಎಸ್ ವಿಜಯದಶಮಿ: ಗಣವೇಷಧಾರಿಗಳ ಪಥಸಂಚಲನ

ಸಂಜೆವಾಣಿ ವಾರ್ತೆ
ಹನೂರು ಅ 23 :-
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಪಥ ಸಂಚಲನ ಉತ್ಸವವು ಹನೂರಿನಲ್ಲಿ ವಿಜೃಂಭಣೆಯಿಂದ ನೆರವೇರಿತು. ಹನೂರು ಪಟ್ಟಣದ ದೇವಾಂಗಪೇಟೆಯ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು, ಗಣವೇಶದಲ್ಲಿ ದಂಡವನ್ನು ಹಿಡಿದು ಪಥ ಸಂಚಲನ ನಡೆಸಿದರು.


ಪಥಸಂಚಲನವು ದೇವಾಂಗಪೇಟೆಯ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಆರಂಭವಾಗಿ, ಮಠದ ಬೀದಿ ಪಟ್ಟಣದ ಮುಖ್ಯ ರಸ್ತೆಗೆ ಬಂದು, ಪೆÇಲೀಸ್ ಠಾಣೆ ಮುಂಭಾಗದ ಅಂಬೇಡ್ಕರ್ ವೃತ್ತವನ್ನು ಬಳಸಿಕೊಂಡು ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಸಾಗಿ, ಬಂಡಳ್ಳಿ ರಸ್ತೆಯಲ್ಲಿ ಚಲಿಸಿ, ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಮಾರ್ಗವಾಗಿ ವಾಸವಿ ಮಹಲ್, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗದ ಕೆಂಪೇಗೌಡ ವೃತ್ತವನ್ನು ಬಳಸಿ ಮತ್ತೆ ದೇವಾಂಗಪೇಟೆ ರಸ್ತೆಗೆ ಬಂದು ಸಮಾಪ್ತಿಗೊಂಡಿತು.
ನಂತರ ಸೇರಿದ್ದ ಸ್ವಯಂಸೇವಕರು ಭಾರತಮಾತೆ, ಸಂಘ ಸಂಸ್ಥಾಪಕರು ಹಾಗೂ ಭಗವದ್ವಜಕ್ಕೆ ಗೌರವ ವಂದನೆ ಸಮರ್ಪಣೆ ಮಾಡಿ ಕಾರ್ಯಕ್ರಮ ಸಂಪನ್ನಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರಕರಾದ ವೇಣು, ಜಿಲ್ಲಾ ಸಹಕಾರ್ಯವಾಹ ಬೆಂಡರಹಳ್ಳಿ ಶಿವಕುಮಾರ್, ತಾಲೂಕು ಕಾರ್ಯವಾಹ ಹರಿಪ್ರಸಾದ್, ಬಿ.ಜೆ.ಪಿ ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ, ಬೆಟ್ಟ ಮುರುಗೇಶ್, ರಾಜೇಂದ್ರ, ಕೃಷ್ಣಮೂರ್ತಿ, ಮೂರ್ತಿ, ರಾಚಪ್ಪ, ಮಹೇಶ್, ಶಿವಕುಮಾರ್, ಜಡೇಸ್ವಾಮಿ, ಜಗದೀಶ್, ವೆಂಕಟೇಶ್, ವಿಜಯ್, ಕೃಷ್ಣೇಗೌಡ, ಸಿದ್ದಪ್ಪ, ವೆಂಕಟೇಗೌಡ, ಚಂದ್ರು ಸೇರಿದಂತೆ ಸ್ವಯಂಸೇವಕರು ಭಾಗವಹಿಸಿದ್ದರು.