Home ಜಿಲ್ಲೆ ಮೈಸೂರು ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಕರಕಲು

ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಕರಕಲು

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.01:
– ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಕಮಲಮ್ಮ ಕುಮಾರ್ ಎಂಬುವರಿಗೆ ಸೇರಿದ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಇದರಿಂದ 2 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


ಹುಲ್ಲಿನ ಮೇದೆಗೆ ಬೆಂಕಿ ಬಿದ್ದ ತಕ್ಷಣವೇ ಗ್ರಾಮಸ್ಥರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಅರಿಸುವ ಪ್ರಯತ್ನ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ
ಪರಿಹಾರ ನೀಡಿ: ಬೆಂಕಿ ಆಕಸ್ಮಿಕಕ್ಕೆ ಭತ್ತದ ಹುಲ್ಲಿನ ಮೇದೆ ಮತ್ತು ರಾಗಿ ಹುಲ್ಲಿನ ಮೇದೆ ಸುಟ್ಟು ಕರಕಲಾಗಿದ್ದು
ಕಮಲಮ್ಮ ಕುಮಾರ್ ಅವರಿಗೆ ಅಪಾರ ನಷ್ಟವಾಗಿದ್ದು ಇವರಿಗೆ ತಾಲೂಕು ಅಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.