
ಬೇಕಾಗುವ ಪದಾರ್ಥಗಳು:
- ಚಿಕನ್ -ಅರ್ಧ ಕೆಜಿ
- ಈರುಳ್ಳಿ -೨
- ಟೊಮೊಟೊ -೨
- ಹಸಿರು ಮೆಣಸಿನಕಾಯಿ ೪
- ಕರಿಬೇವು ೫
- ಗಸಗಸೆ -೧ ಚಮಚ
- ಶುಂಠಿ – ಬೆಳ್ಳುಳ್ಳಿ ಪೇಸ್ಟ್
- ೧ ಚಮಚ
- ಕಾಳು ಮೆಣಸಿನ ಪುಡಿ
- ೧ ಚಮಚ
- ಕೊತ್ತಂಬರಿ ಸೊಪ್ಪು -೧ ಕಟ್ಟು
- ಎಣ್ಣೆ ೫೦
- ಉಪ್ಪು ೧ ಚಮಚ
- ಮೊಸರು ೧ ಚಮಚ
- ಲವಂಗ ೫
- ಚಕ್ಕೆ ೩ ಪೀಸ್
- ಏಲಕ್ಕಿ ೩ * ಸೋಂಪು -೧ ಚಮಚ
- ಜೀರಿಗೆ ಅರ್ಧ ಚಮಚ * ಶುಂಠಿ ೧ ಚಮಚ
- ಬೆಳ್ಳುಳ್ಳಿ -೧ ಚಮಚ
- ಧನಿಯಾ ೧ ಚಮಚ
ಮಾಡುವ ವಿಧಾನ :ಬೌಲ್‌ಗೆ ಚಿಕನ್, ಮೊಸರು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕರಿಬೇವು, ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೆನೆಯಲು ಬಿಡಿ. ಪ್ಯಾನ್‌ಗೆ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಧನಿಯಾ, ಗಸಗಸೆ ಹಾಕಿ ಹುರಿದುಕೊಳ್ಳಿ, ತಣ್ಣಗಾದ ನಂತರ ರುಬ್ಬಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಸೋಂಪು, ಈರುಳ್ಳಿ, ಉಪ್ಪು ಹಾಕಿ ಹುರಿದು, ಟೊಮೊಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರುಮೆಣಸಿನಕಾಯಿ ಹಾಕಿ ಪ್ರೈ ಮಾಡಿ. ಇದಕ್ಕೆ ನೆನೆಸಿದ ಚಿಕನ್ ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ, ರುಬ್ಬಿದ ಮಸಾಲ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ, ಆಂಧ್ರ ಸ್ಟೈಲ್ ಚಿಕನ್ ಪ್ರೈ ರೆಡಿ.