ಅ.26 ಬೀಜಿಂಗ್‍ನಲ್ಲಿ ಮನು-ಲಿಖಿತಾರಿಂದ ಸಾಕ್ಷ್ಯಚಿತ್ರ ಪ್ರದರ್ಶನ

ಬೆಂಗಳೂರು,ಅ.24;- ಭಾರತ-ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ನಿಯೋಗ ಬೀಜಿಂಗ್ ತೆರಳುತ್ತಿದ್ದು, ನಗರದ ಯು.ಕೆ. ಲಿಖಿತಾ ಮತ್ತು ಜೆ. ಮನು ಜೋಡಿ ಅಲ್ಲಿ ಕುಚಿಪುಡಿ, ಕಥಕ್ ಮತ್ತು ಭರತನಾಟ್ಯ ಕಲೆಯ ಸಾಕ್ಷ್ಯಚಿತ್ರದ ಪ್ರಸ್ತುತ ಪಡಿಸಲು ಭಾರತದಿಂದ ಚೀನಾಕ್ಕೆ ತೆರಳಿದ್ದಾರೆ.


ಬಹುಮುಖ ನೃತ್ಯಕಲಾವಿದ ಮತ್ತು ಸಾಂಸ್ಕೃತಿಕ ರಾಯಭಾರಿ ಜೆ. ಮನು ಮತ್ತು ಲಿಖಿತಾ ಜೋಡಿ ಇಂದು ಬೀಜಿಂಗ್ ಗೆ ತೆರಳಿದರು.ಅ. 26 ರಂದು ಭವ್ಯ ವೇದಿಕೆಯಲ್ಲಿ ನಮ್ಮ ಸಂಸ್ಕೃತಿಯ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಭಾರತ-ಚೀನಾ ಸ್ನೇಹ ಬಾಂಧವ್ಯವನ್ನು ಬಲಪಡಿಸಲಿದೆ.


ಜೆ. ಮನು ಅವರು ಕುಚಿಪುಡಿ, ಕಥಕ್ ಮತ್ತು ಭರತನಾಟ್ಯ ಪ್ರವೀಣ. ವಿದುಷಿ ರೇಖಾ ಜಗದೀಶ, ಗುರು ಡಾ. ವೀಣಾ ಮೂರ್ತಿ ವಿಜಯ್, ಗುರು ರಾಧಾ ಶ್ರೀಧರ್ ಹಾಗೂ ಗುರು ಹರಿ ಚೇತನ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಅವರು ಮನೋಹರ ಭಾವಭಂಗಿ, ಲಯಬದ್ಧತೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಇವರು ಈಗಾಗಲೇ ಭಾರತ, ಚೀನಾ, ಮಲೇಶಿಯಾ, ಶ್ರೀಲಂಕಾ, ಸಿಂಗಪುರ ಮತ್ತು ಯು.ಎ.ಇ ಸೇರಿದಂತೆ ಅನೇಕ ದೇಶಗಳಲ್ಲಿ ತಮ್ಮ ನೃತ್ಯಕಲೆಯ ಮೆರುಗು ತೋರಿದ್ದಾರೆ. ಅವರು ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಪ್ರತಿಭಾ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದುಬೈಯಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು.