
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಅ.23: ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಒಕ್ಕಲಿಗರ ಸಂಘ ಹಾಗೂ ಟೌನ್ ಒಕ್ಕಲಿಗ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಧು-ವರರ ಸಮಾವೇಶ ಕಾರ್ಯಕ್ರಮವನ್ನು ಅ.25ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಕೆ.ಮಧುಚಂದ್ರ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನೇಗಿಲಯೋಗಿ ಸೇವಾ ಟ್ರಸ್ಟ್ ಮೈಸೂರು ನಗರದಲ್ಲಿ ಕೇಂದ್ರ ಸ್ಥಾನ ಹೊಂದಿದ್ದು ಎಲ್ಲಾ ತಾಲೂಕುಗಳಲ್ಲಿ ಶಾಖೆಯನ್ನು ಆರಂಭಿಸಿ ಒಕ್ಕಲಿಗ ಸಮಾಜ ಮೌಢ್ಯತೆಯಿಂದ ದೂರ ಬಂದು ಆಧುನಿಕ ಜಗತ್ತಿನಲ್ಲಿ ತನ್ನದೇ ಆದ ಸೇವೆ ನೀಡುವಂತೆ ಟ್ರಸ್ಟ್ ಪ್ರೇರಪಣೆ ಮಾಡುತ್ತಿದೆ ಎಂದರು.
ರಾಜ್ಯ ಮಟ್ಟದ ವಧು-ವರರ ವೇದಿಕೆಯ ಸಮಾಮೇಶ ಮಾಡುವ ಮೂಲಕ ಕಂಕಣ ಸಂಬಂಧ ಬೆಸೆಯುವುದರ ಜತೆಗೆ ಸಮಾಜವನ್ನು ಸರಿದಾರಿಯಲ್ಲಿ ಕೊಂಡ್ಯೋಯವ ಕೆಲಸವನ್ನು ಟ್ರಸ್ಟ್ ಮಾಡುತ್ತಿದ್ದು ಇದಕ್ಕೆ ಒಕ್ಕಲಿಗ ಸಮಾಜದ ಬಂಧುಗಳು ಸಹಕಾರ ನೀಡಬೇಕು ಎಂದು ಕೋರಿದರು.
ವಧು-ವರರ ಸಮಾವೇಶ ಮಾಡಿ ಯುವಕ-ಯುವತಿರಿಗೆ ಕಂಕಣ ಭಾಗ್ಯ ದೊರಕಿಸಿಕೊಡುವ ಕೆಲಸ ಮಾಡುವುದಲ್ಲದೆ ಟ್ರಸ್ಟ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷ ಎಸ್.ಕೆ.ಮಧುಚಂದ್ರ ದೇಶ ಮತ್ತು ರಾಜ್ಯದ ಅಭಿವೃದ್ಧಿಗೂ ಟ್ರಸ್ಟ್ ತನ್ನದೇ ಆದ ಸಲಹೆ-ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಅ.25 ರಂದು ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶ ಕಾರ್ಯಕ್ರಮವನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಉದ್ಘಾಟನೆ ಮಾಡಲಿದ್ದು, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮತ್ತು ಎರಡು ತಾಲೂಕುಗಳ ಒಕ್ಕಲಿಗರ ಸಂಘದ ಅಧ್ಯಕ್ಷರುಗಳು ಮತ್ತು ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸಿ.ಎಸ್.ರಾಮಲಿಂಗು, ರಾಮಕೃಷ್ಣೇಗೌಡ, ರೂಪಾಮಂಜುನಾಥ್, ಸುನೀತರಮೇಶ್, ರಮ್ಯ, ಮಧುವನಹಳ್ಳಿಕೇಶವ, ವೆಂಕಟೇಶ್, ಕೆ.ಹೆಚ್.ಯೋಗಣ್ಣ, ಎಸ್.ಕೆ.ರಮೇಶ್, ಟಿ.ಎನ್.ಕುಮಾರೇಗೌಡ, ನಾಗರಾಜು, ಎ.ಎಲ್.ಸುರೇಶ್, ಹೆಚ್.ಎನ್.ವೆಂಕಟೇಶ್, ಮಮತ ಲೋಕೇಶ್, ಶೀಲಾಚೇತನ್, ಸುನೀತರಾಜೇಶ್, ಇನ್ನಿತರರು ಹಾಜರಿದ್ದರು.
























