ಅಶ್ರಫ್ ಗುಂಪು ಹತ್ಯೆ ಪ್ರಕರಣ: ಮತ್ತೆ ಮೂವರಿಗೆ ಜಾಮೀನು: ಬಂಧಿತರ ಪೈಕಿ ಒಟ್ಟು ಐದು ಮಂದಿಗೆ ಜಾಮೀನು

ಮಂಗಳೂರು: ನಗರದ ಹೊರವಲಯದ ಕುಡುಪುನಲ್ಲಿ ಕೇರಳದ ವಯನಾಡ್‌ನ ಅಶ್ರಫ್‌ನನ್ನು ಥಳಿಸಿ ಕೊಂದ ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯ ಮತ್ತೆ ಇಬ್ಬರಿಗೆ ಜಾಮೀನು ನೀಡಿದೆ. ಇದೀಗ ಒಟ್ಟು ಬಂಧಿತರ ಪೈಕಿ ಐವರಿಗೆ ಜಾಮೀನು ದೊರೆತಿದೆ.
ಈ ಪ್ರಕರಣದ ೧೪, ೧೫ ಮತ್ತು ೧೯ನೇ ಆರೋಪಿಗಳಾದ, ಕ್ರಮವಾಗಿ ಸಂದೀಪ್, ದೀಕ್ಷಿತ್ ಮತ್ತು ಸಚಿನ್‌ಗೆ ನ್ಯಾಯಾಲಯ ಜಾಮೀನು ನೀಡಿದೆ.
ಈಗಾಗಲೇ ಪ್ರಕರಣದ ಆರೋಪಿಗಳಾದ ರಾಹುಲ್ ಮತ್ತು ಸುಶಾಂತ್ ಗೆ ನ್ಯಾಯಾಲಯವು ಜಾಮೀನು ನೀಡಿತ್ತು.
ಘಟನೆ ನಡೆದ ೩೫ ದಿನಗಳಲ್ಲೇ ಐವರು ಆರೋಪಿಗಳಿಗೆ ಜಾಮೀನು ದೊರೆತಿದೆ